ಯಲ್ಲಾಪುರ: ತಾಲೂಕಿನ ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಪೋಷಣ ಅಭಿಯಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಗುರುರಾಜ ಆಚಾರಿ ವಹಿಸಿದ್ದರು.
ಶಿಕ್ಷಕ ಮಹೇಶ ಭಟ್ ಪೋಷಕಾಂಶಗಳ ಮಹತ್ವದ ಕುರಿತು ಮಾತನಾಡಿ, "ನಮ್ಮ ದೇಹಕ್ಕೆ ಪೋಷಕಾಂಶಗಳು ಎಷ್ಟು ಅಗತ್ಯವಿರುವವು ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿ ದಿನದ ಆಹಾರದಲ್ಲಿ ಪೋಷಕಾಂಶಗಳನ್ನು ಸಮರ್ಪಕವಾಗಿ ಸೇರಿಸುವ ಮೂಲಕ ನಾವು ಆರೋಗ್ಯವನ್ನು ಸುಧಾರಿಸಬಹುದು," ಎಂದು ತಿಳಿಸಿದರು. ಅವರು ಪೋಷಕಾಂಶಗಳ ಮಹತ್ವದ ಕುರಿತು ವಿವರಿಸಿದರು.
ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ, ಮಕ್ಕಳ ಬೆಳವಣಿಗೆಗೆ ತರಕಾರಿ, ಸೊಪ್ಪು, ಬಿಸಿಯೂಟ, ಕ್ಷೀರಭಾಗ್ಯ ಮತ್ತು ಇತರ ಪೋಷಕ ಆಹಾರಗಳ ಪ್ರಭಾವದ ಕುರಿತು ಮಾತನಾಡಿ, "ಮಕ್ಕಳು ಇಂದಿನಿಂದ ತರಕಾರಿ ತಟ್ಟೆಯಿಂದ ತೆಗೆಯದೆ ತಿನ್ನಬೇಕು ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಬೇಕು" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ಆಶಾ ನಾಯರ್, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕರು ಹಾಗೂ ಮಕ್ಕಳೂ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ತ್ರೇಷಾ ನೋಹಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಾಗರಾಜ ಆಚಾರಿ ಸ್ವಾಗತಿಸಿದರು, ಶಿಕ್ಷಕ ರಾಮ ಗೌಡ ವಂದಿಸಿದರು.