ಯಲ್ಲಾಪುರ: ಉಮ್ಮಚಗಿ ಪಂಚಾಯತ್ ವ್ಯಾಪ್ತಿಯ ಕನೇನಳ್ಳಿ, ಕೋಟೆಮನೆ, ಸೀಗೆಮನೆ, ಉಮ್ಮಚ್ಗಿ, ಕಾನಗೋಡ, ಚವತ್ತಿ, ತಾರೆಹಳ್ಳಿ, ತುಡುಗುಣಿ, ಹಾಸ್ಪುರ ಹೀಗೆ ಅನೇಕ ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ವ್ಯಾಪಕವಾಗಿ ತಲುಪಿದ್ದು, ರೈತರಿಗೆ ತಲೆನೋವಾಗುತ್ತಿದೆ. ಅಡಿಕೆಗೆ ರೋಗ ಬಾಧೆಯಾಗಿರುವುದರಿಂದ ಹಲವರು ತಲೆ ಮೇಲೆ ಕೈ ಹಾಕಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಅಡಿಕೆಗೆ ಕೊಳೆ ರೋಗ ಬಾಧೆಯಾಗಿರುವುದು ಮಾತ್ರವಲ್ಲದೆ, ಈಗಾಗಲೇ ಅಡಿಕೆ ಬೆಲೆ ತೀವ್ರವಾಗಿ ಕುಸಿತ ಕಂಡು ಬಂದಿರುವುದು, ರೈತರನ್ನು ಸಮಸ್ಯೆಯಾಗಿದೆ. ಕೆಲವು ರೈತರು ತಮಗಾದ ಹಾನಿ ಬಗ್ಗೆ ಚಿಂತಿಸುತ್ತಾ, ಬೆಳೆ ಸುಧಾರಣೆಗೆ ಪ್ರಯತ್ನಿಸುತ್ತಿದ್ದಾರೆ. ಮಳೆಗಾಗಿ ನಿರೀಕ್ಷಿಸುತ್ತಿದ್ದ ರೈತರಿಗೆ, ಈ ವರ್ಷ ಮುಂಗಾರು ಮಳೆಯು ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಸುರಿದಿದ್ದು, ಇದು ಅಡಿಕೆ ಬೆಳೆಗಳಿಗೆ ಕೊಳೆ ರೋಗವನ್ನು ಬರಲು ಪ್ರಮುಖ ಕಾರಣವಾಗಿದೆ.
ಈ ಪ್ರದೇಶದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಸುರಿಯುತ್ತಿರುವ ಎಡೆಬಿಡದೆ ಮಳೆಯು, ಅಡಿಕೆ ಬೆಳೆಗಳಿಗೆ ಗಂಭೀರ ಹಾನಿ ಉಂಟುಮಾಡಿದೆ. ಕಳೆದೆರಡು ತಿಂಗಳಲ್ಲಿ ಆಕ್ರಮಣಕಾರಿ ಕೊಳೆ ರೋಗವು ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಬೆಳೆಗಾರರು ವಿಪತ್ತು ಎದುರಿಸುತ್ತಿದ್ದಾರೆ. ಆದರೆ, ಕೆಲವು ರೈತರು ಎರಡು ಅಥವಾ ಮೂರು ಸಲ ಮದ್ದು ಸಿಂಪರಣೆ ಮಾಡಿದರೂ ಸಹ ರೋಗವನ್ನು ತಡೆಯಲು ವಿಫಲವಾಗಿದ್ದಾರೆ. ಇದು ಇನ್ನು ಮಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರ ಕಷ್ಟವನ್ನು ಹೆಚ್ಚಾಗುವಂತೆ ಮಾಡಿದೆ.
ಈ ಭಾಗದಲ್ಲಿಯ ರೈತರ ತಮ್ಮ ಸಂಕಷ್ಟವನ್ನು ಹಂಚಿಕೊಂಡು, "ನಾವು ಮೂರು ಸಲ ಮದ್ದು ಸಿಂಪಡಿಸಿದರೂ ರೋಗ ಹೋಗದೇ ಇರುವುದೇ ತುಂಬಾ ವಿಚಿತ್ರವಾಗಿದೆ" ಎಂಬುದಾಗಿ ಹೇಳುತ್ತಾರೆ.
ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಅವರು, ಈ ಭಾಗದಲ್ಲಿ ಕಳೆದ ಅವಧಿಯಲ್ಲಿ ಅಡಿಕೆ ಬೆಳೆಗಳಿಗೆ ಕೊಳೆ ಪರಿಹಾರ ನೀಡುವಲ್ಲಿ ಸಫಲರಾಗಿದ್ದರು. ಅವರು ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದಾಗ, ಹಲವು ರೈತರಿಗೆ ಸರ್ಕಾರದಿಂದ ಸಬ್ಸಿಡಿ ದೊರಕುವಂತೆ ಪ್ರಯತ್ನಿಸಿದ್ದರು. ಈಗ ಮತ್ತೆ ಇಂತಹ ಸಹಾಯ ಸರ್ಕಾರದಿಂದ ದೊರೆಯುವುದಕ್ಕೆ ಸಾಕಷ್ಟು ಸಾಧ್ಯತೆಗಳಿದ್ದು, ರೈತರು ಅವರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.
.
.
.