ಯಲ್ಲಾಪುರ : ಇತ್ತೀಚಿಗೆ ನಡೆದ ಪ್ರೌಢಶಾಲಾ ಕಿರವತ್ತಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಕ್ಕಳು 228 ಅಂಕಳೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ವಿಶ್ವ ಆಚಾರಿ 400 ಮೀಟರ್ ಓಟದಲ್ಲಿ, ಕಾರ್ತಿಕ ವರಕ 800 ಓಟದಲ್ಲಿ, ವಾಜಿ ಶಿಂದೆ 1500 ಮೀಟರ್ ಓಟದಲ್ಲಿ, ಮಂಜುನಾಥ್ ಸಿಂಧೆ ಈಟಿ ಏಸೆತದಲ್ಲಿ, ನಂದನ್ ಗೇರ್ ಗೆದ್ದೆ ಚೆಸ್‍ನಲ್ಲಿ ಪ್ರಥಮ ಹಾಗೂ ಬಾಲಕರ ವಿಭಾಗದ ಖೋಖೋದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟ ಹಾಗೂ 110 ಮೀ ಹರ್ಡಲ್ಸ್‍ನಲ್ಲಿ ಛಾಯಾಸಿದ್ಧಿ , 200 ಮೀಟರ್ ಓಟದಲ್ಲಿ ಗೀತಾ ಸಿದ್ದಿ ,400 ಮತ್ತು 800ಮೀ ಓಟದಲ್ಲಿ ಜಯಶ್ರೀ ಮೈಲಾರ್, 1500 ಮೀಟರ್ ಓಟದಲ್ಲಿ ರಕ್ಷಿತಾ ಎಂ ಮರಾಠಿ, 400ಮೀಟರ್ ಹರ್ಡಲ್ಸನಲ್ಲಿ ರಕ್ಷಿತಾ ಎಸ್ ಮರಾಠಿ, 3000 ಮೀಟರ್ ನಡಿಗೆ ಕೃಪಾ ಮರಾಠಿ, 3000ಮೀಟರ್ ಓಟದಲ್ಲಿ ಕವಿತಾ ಮರಾಠಿ, ಈಟಿ ಎಸೆತ ಸಂಧ್ಯಾ ಗೌಡ , ಚಕ್ರ ಎಸೆತ ಸಂಧ್ಯ ಗೌಡ , ಉದ್ದ ಜಿಗಿತ ರೇಷ್ಮಾ ಚೌಕೇಳೆಕರ್, ತ್ರಿವಿಧ ಜಿಗಿತ ಪ್ರಿಯಾಂಕ ಸಿದ್ದಿ ಪ್ರಥಮ ಸ್ಥಾನ ಗಳಿಸಿದ್ದು 100 X 400ರಿಲೇ ಗೀತಾ ಸಿದ್ದಿ ತಂಡ , 400 X 400ರಿಲೇ ರಕ್ಷಿತಾ ಎಸ್, ಬಾಲಕಿಯರ ಖೋಖೋ, ಕಬ್ಬಡ್ಡಿ , ಥ್ರೋಬಾಲ್‍ಗಳಲ್ಲಿ ಪ್ರಥಮಸ್ಥಾನ ಗಳಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ರವಿಕುಮಾರ ಲಕ್ಷ್ಮಣ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಬಿ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಮುಖ್ಯೋಪಾಧ್ಯಾಪಕ ಎನ್.ಎಸ್ ಭಟ್ಟ, ಕಾಲೇಜಿನ ಪ್ರಾಂಶುಪಾಲ ಆನಂದ ಹೆಗಡೆ & ಶಾಲೆಯ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.
.
.
.