ಶಿಕ್ಷಕ ವೃತ್ತಿಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂತೋಷ್ ಕೊಳಗೇರಿ ಅವರು 1985 ರಲ್ಲಿ ಬೆಳಗಾವಿಯ ಖಾನಾಪುರ ತಾಲೂಕಿನ ಮರಾಠಿ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ನಂತರ 1986 ರಲ್ಲಿ ಜೋಯಿಡಾ ತಾಲೂಕಿನ ರಾಮನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1992 ರಲ್ಲಿ ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ 1999 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿನ್ನಾಪುರದಲ್ಲಿ ಸೇವೆ ಸಲ್ಲಿಸಿದರು. 2015 ರಲ್ಲಿ ಅವರು ಪದೋನ್ನತ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು.
ಸಂತೋಷ್ ಕೊಳಗೇರಿ ಅವರು ಮಂಡಲ ಪಂಚಾಯತ ಹಾಗೂ ತಾಲೂಕ ಪಂಚಾಯತದಲ್ಲಿ ಸಾಕ್ಷರತಾ ಸಮನ್ವಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಅವರು. ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ಅವರು ಕ್ರೀಡಾಭಿಮಾನಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಉತ್ತಮ ವಾಕ್ ಚಾತುರ್ಯ ಹೊಂದಿದ ನಿರೂಪಕರು ಮತ್ತು ಹಿರಿಯರು, ಕಿರಿಯರು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ತಮ್ಮ ಸಂಘಟನೆಗಳಿಗೆ ಹೆಸರಾಗಿದ್ದರು ಮತ್ತು ಅಜಾತಶತ್ರುಗಳು ಎಂದು ಪರಿಗಣಿಸಲ್ಪಡುತ್ತಿದ್ದರು.
ಸಂತೋಷ್ ಕೊಳಗೇರಿ ಅವರಿಗೆ ತಾಲೂಕಿನ ಮತ್ತು ಜಿಲ್ಲೆಯ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬಂದಿದ್ದವು. ಅವರು ಅನೇಕ ಸನ್ಮಾನಗಳನ್ನು ಪಡೆದಿದ್ದಾರೆ.
ಸಂತೋಷ ಕೊಳಗೇರಿಯವರನ್ನು ಅವರನ್ನು ಆ.31 ಪ್ರೀಡಂ ಪಾರ್ಕ ಬೆಂಗಳೂರು ಚಲೋ ಟೀಮ್ ಸನ್ಮಾನಿಸಿ ಬೀಳ್ಕೊಟ್ಟರು.