ಯಲ್ಲಾಪುರ : ಪಟ್ಟಣದ ತಿಲಕ್ ಚೌಕದಲ್ಲಿ ನಡೆದ ಮೊದಲ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಗಣಹವನ ಹಾಗೂ ಅನ್ನ ಸಂತರ್ಪಣೆ ಸಮಾರಂಭದಲ್ಲಿ ಪಟ್ಟಣದ ವಿಶಿಷ್ಟ ಹಬ್ಬದ ಉಲ್ಲಾಸ ವ್ಯಕ್ತವಾಯಿತು. ಗಣೇಶ ಚತುರ್ಥಿಯ ಪ್ರಯುಕ್ತ, ಪಟ್ಟಣದ ಇತಿಹಾಸದಲ್ಲಿಯೇ ಅತ್ಯಂತ ಹಳೆಯ ಮತ್ತು ಪ್ರಮುಖ ಗಣೇಶೋತ್ಸವವಾಗಿ ಪರಿಗಣಿಸಲ್ಪಟ್ಟ ತಿಲಕ್ ಚೌಕದಲ್ಲಿ ಈ ವರ್ಷವೂ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ನಂತರ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ತಿಲಕ್ ಚೌಕ ಸಮಿತಿಯು ಶ್ರದ್ಧಾ ಮತ್ತು ಭಕ್ತಿ, ಗಣಹವನ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಡೆಸಿ ತನ್ಮೂಲಕ ಸಮಾರಂಭದ ಪ್ರತಿಯೊಬ್ಬ ಭಕ್ತನಿಗೆ ಅನ್ನಪ್ರಸಾದವನ್ನು ಒದಗಿಸುವ ಮೂಲಕ ಭಾವಾತ್ಮಕ ಹಬ್ಬದ ಸಮರ್ಪಣೆಯನ್ನು ಸಲ್ಲಿಸಿತು. ಈ ವರ್ಷ ಸುಮಾರು 7 ಸಾವಿರ ಜನರು ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿದರು. ಗಣಹೋಮ ಮತ್ತು ಪೂಜಾ ಕಾರ್ಯವನ್ನು ಅರ್ಚಕರಾದ ವಿಶ್ವೇಶ್ವರ ಕೊಂಬೆ ಮತ್ತು ಶಂಕರ ಭಟ್ಟ ನೆರವೇರಿಸಿದರು.
ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರುಳಿ, ಪ್ರಧಾನ ವ್ಯವಸ್ಥಾಪಕ ಜಿ ಎನ್ ಹೆಗಡೆ, ವೈಟಿಎಸ್ಎಸ್ ಪ್ರಾಂಶುಪಾಲ ಆನಂದ ಹೆಗಡೆ, ಪೊಲೀಸ ಇನ್ಸಪೆಕ್ಟರ್ ರಮೇಶ ಹಾನಾಪುರ, ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳು, ಹಾಗೂ ವಿವಿಧ ಸಹಕಾರಿ ಸಂಘಗಳ ಪ್ರಮುಖರು, ಸರ್ಕಾರಿ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮತ್ತು ಸಾರ್ವಜನಿಕರು ಅನ್ನಪ್ರಸಾದ ಸ್ವೀಕರಿಸಿದರು.
.
ಉದ್ಯಮಿ ಹಾಗೂ ತಿಲಕ್ ಚೌಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಶಿರಿಷ ಪ್ರಭು, ಮಂಜುನಾಥ ರಾಯ್ಕರ, ಗುತ್ತಿಗೆದಾರ ಮಾಲತೇಶ ಗೌಳಿ, ತಿಲಕ್ ಪರಿವಾರದ ಪ್ರಮುಖ ಸದಸ್ಯರುಗಳಾದ ಸುಧಾಕರ ಪ್ರಭು, ಸದಾನಂದ ಶಾನಭಾಗ, ಮಾದವ ನಾಯಕ್, ದತ್ತಾ ಬದ್ದಿ, ಗಿರೀಶ ಪೈ, ಸಿದ್ಧಾರ್ಥ ನಂದೊಳ್ಳಿಮಠ, ರಜತ ಬದ್ದಿ, ಕೌರವ ಬದ್ದಿ, ಹೇಮಂತ ಗುಂಜೀಕರ, ನಯನ ಇಂಗಳೆ, ವಿಕ್ರಮ ಸಾಲಗಾಂವ್ಕರ, ಮಾರುತಿ ಪ್ರಭು, ಪವನ ಕಾಮತ, ಮೂರ್ತಿ ಗುಡಿಗಾರ, ನಮೀತಾ ಬೀಡಿಕರ, ಲಕ್ಯಾ ಕಿತ್ತೂರು, ಚಂದ್ರಕಾಂತ ಕಿತ್ತೂರು, ನಾಗರಾಜ ಆಚಾರಿ, ಬಾಬು ಗುಡಿಗಾರ, ರಮಣ ಅಸೂಕರ ಇತರ ಸದಸ್ಯರು ಮತ್ತು ಹಲವಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹಬ್ಬದ ಅಂಗವಾಗಿ ಸೆಪ್ಟೆಂಬರ್ 13 ರಂದು ಸಂಜೆ ವಿ ಎಚ್ ಹೌಸ್ ಆಫ್ ನೃತ್ಯ ತಂಡದಿಂದ ನೃತ್ಯ ಕಾರ್ಯಕ್ರಮ, 14 ರಂದು ಸಂಜೆ ತಿಲಕ್ ಮೇಲೋಡಿಸ್ ಅವರಿಂದ ಸಂಗೀತ ರಸಮಂಜರಿ, 15 ರಂದು ಮಧ್ಯಾಹ್ನ 3:00 ಗಂಟೆಗೆ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆ, ಮತ್ತು ಸಂಜೆ ಛದ್ಮವೇಷ ಸ್ಪರ್ಧೆ ನಡೆಯಲಿದೆ. 16 ರಂದು ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.