ಯಲ್ಲಾಪುರ: ಕಾಳಮ್ಮನಗರದ ಕಾಸಿಂ ಖಾನ್ ಅವರ ಮನೆಯಲ್ಲಿ ಗುರುವಾರ ಯಲ್ಲಾಪುರ ತಾಲೂಕಾ 5 ಗ್ಯಾರಂಟಿ ಪ್ರಾಧಿಕಾರದ ಸಭೆ ನಡೆಯಿತು. ಸಭೆಯಲ್ಲಿ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಾಗೂ ಪಡಿತರ ಚೀಟಿಯ ಹಣ ವರ್ಗಾವಣೆಯಲ್ಲಿ ವಿಳಂಬವಾಗಿರುವುದರಿಂದ, ಪ್ರಾಧಿಕಾರವು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು.
ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾದ ಉಲ್ಲಾಸ್ ಶಾನಭಾಗ್, ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷರು ಡಿ.ಎನ್. ಗಾಂವಕರ, ಜಿಲ್ಲಾ ಮಹಿಳಾ ಸಂಘಟನೆಯ ಸಂಯೋಜಕರಾದ ಸರಸ್ವತಿ ಗುನಗಾ, ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಪೂಜಾ ನೆತ್ರೆಕರ್, ತಾಲೂಕಾ ಪ್ರಾಧಿಕಾರದ ಸದಸ್ಯರಾದ ನರ್ಮದಾ ನಾಯ್ಕ, ಅನಿಲ ಮರಾಠೆ, ಹಿರಿಯರಾದ ಬಾಬಣ್ಣ, ದೇವಿದಾಸ್ ನಾಯರ್ ಹಾಗೂ ಕಾಳಮ್ಮ ನಗರದ ನಿವಾಸಿಗಳು ಭಾಗವಹಿಸಿದರು.
ಸಭೆಯ ಸಂದರ್ಭ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷರಾದ ನರ್ಮದಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅನಿಲ ಮರಾಠೆ ಸ್ವಾಗತಿಸಿದರು ಮತ್ತು ದೇವಿದಾಸ್ ನಾಯರ್ ವಂದಿಸಿದರು.
.
.
.