ಯಲ್ಲಾಪುರ: ಪಟ್ಟಣದ ತಿಲಕ ಚೌಕದ ಶ್ರೀ ಗಜಾನನೋತ್ಸವ ಸಮಿತಿಯು ಈ ವರ್ಷ 58 ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದೆ. 1966 ರಲ್ಲಿ ಸ್ಥಾಪನೆಯಾದ ಈ ಸಮಿತಿ, ಯಲ್ಲಾಪುರ ತಾಲೂಕಿನ ಮೊದಲ ಸಾರ್ವಜನಿಕ ಗಣೇಶೋತ್ಸವ ಸಮಿತಿಯಾಗಿದೆ. ಆರಂಭದಿಂದಲೇ ಸಮಿತಿ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಪ್ರತಿ ವರ್ಷ ಗಣಪತಿ ಹಬ್ಬವನ್ನು ವೈಭವದಿಂದ ಆಚರಿಸುತ್ತಿದೆ.
ಸಮಿತಿಯ ಇತಿಹಾಸ:
1985 ರಲ್ಲಿ 25 ನೇ ವರ್ಷದ ರಜತ್ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 2015 ರಲ್ಲಿ ಸಮಿತಿಯು ಸ್ವರ್ಣ ಮಹೋತ್ಸವವನ್ನು ಕೊಂಡಾಡಿತು. ಈ ಸಂದರ್ಭದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು, ಸಮೂಹ ಗಣಪತಿ ಹವನಗಳು ಮತ್ತು ಉತ್ಸವಗಳು ನಡೆದವು. ಇದಲ್ಲದೆ, ಸಮಿತಿಯು 45 ಲಕ್ಷ ರೂಪಾಯಿಗಳಲ್ಲಿ ಸುಂದರ ಕಟ್ಟಡವನ್ನು ನಿರ್ಮಿಸಿದೆ.
ಬೆಳ್ಳಿ ಕಿರೀಟ ಮತ್ತು ಪ್ರಭಾವಳಿ:
1990 ರಲ್ಲಿ, ಯಲ್ಲಾಪುರ ಗೆಳೆಯರ ಬಳಗವು ಬೆಳ್ಳಿ ಕಿರೀಟವನ್ನು ಸಮಿತಿಗೆ ಸಮರ್ಪಿಸಿತು. ಈ ವರ್ಷ, ಉತ್ಸವದ ಸಂದರ್ಭದಂತೆ 20 ಲಕ್ಷ ರೂಪಾಯಿಗಳಲ್ಲಿ ಗಣಪತಿ ಮತ್ತು ಪೂಜಾ ಗಣಪತಿಗೆ ಹೊಸ ಬೆಳ್ಳಿ ಕಿರೀಟ ಮತ್ತು ಪ್ರಭಾವಳಿಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಬೆಳ್ಳಿ ಹೂವಿನ ಮಂಟಪ, ಸುಣ್ಣ ಬಣ್ಣ ಅಲಂಕಾರ ಸೇರಿದಂತೆ ಸಮಗ್ರ ಶೃಂಗಾರ ಮಾಡಲಾಗಿದೆ.
ವಾಣಿಜ್ಯ ಸಂಕೀರ್ಣ ನಿರ್ಮಾಣ:
2022-23 ರಲ್ಲಿ, ವಿಂಪ್ ಕಂಪನಿಯ ಮೂಲಕ ಸಮಿತಿಯ ಕಟ್ಟಡದ ಮೇಲ್ಚಾವಣಿ 4 ಲಕ್ಷ ರೂಪಾಯಿಗಳಲ್ಲಿ ನವೀಕರಿಸಲಾಯಿತು. 2023 ರಲ್ಲಿ 12 ಲಕ್ಷ ವೆಚ್ಚದಲ್ಲಿ ಪಕ್ಕದ ಜಾಗದಲ್ಲಿ ಮೂರು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಈ ಸಂಕೀರ್ಣಗಳು ಸಮಿತಿಗೆ ಆರ್ಥಿಕವಾಗಿ ಸಹಾಯ ಮಾಡಲಿವೆ.
ಪ್ರತಿ ವರ್ಷದ ಮಹಾ ಅನ್ನಸಂತರ್ಪಣೆ:
2012 ರಿಂದ ಸಮಿತಿಯು ಪ್ರತಿ ವರ್ಷ ಸುಮಾರು 5000 ರಿಂದ 6000 ಜನರಿಗೆ ಮಹಾ ಅನ್ನಸಂತರ್ಪಣೆಯನ್ನು ನಡೆಸುತ್ತಿದೆ. ಈ ವರ್ಷ ಸೆಪ್ಟೆಂಬರ್ 13 ರಂದು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲೂ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಈ ವರ್ಷದ ವಿಶೇಷ ಆಚರಣೆ:
58 ನೇ ವರ್ಷದ ಈ ಉತ್ಸವ 9 ದಿನಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಂದ ಕೂಡಿದೆ. ಗಣಹವನ, ಸಹಸ್ರ ದುರ್ವರ್ಚನೆ ಮತ್ತು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿವೆ. ಈ ವರ್ಷ, ಸೆಪ್ಟೆಂಬರ್ 07 ರಂದು ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ, ಸೆಪ್ಟೆಂಬರ್ 17 ರಂದು ವಿಸರ್ಜನಾ ಮಹಾಪೂಜೆ, ಮತ್ತು ಸೆಪ್ಟೆಂಬರ್ 18 ರಂದು ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ.
ಸಮಿತಿಯ ಸಕ್ರಿಯ ಸದಸ್ಯರು :
ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸಮಿತಿಯ ಸಕ್ರಿಯ ಸದಸ್ಯರು ಸುತ್ತಮುತ್ತಲಿನ ಪ್ರದೇಶದಿಂದ ಬಂದು, ರಾತ್ರಿ ಹಗಲು ಎನ್ನದೆ ತೊಡಗಿಸಿಕೊಂಡಿದ್ದಾರೆ. ಉತ್ಸವದ ಸಿದ್ಧತೆಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರಲ್ಲಿ ಅತಿಥಿಗಳಾದ ರವಿ ಶಾನಭಾಗ, ಸುಧಾಕರ ಪ್ರಭು, ಗಿರೀಶ ಪೈ, ಸಿದ್ಧಾರ್ಥ ನಂದೊಳ್ಳಿಮಠ, ಹಾಗೂ ಕೌರವ ಬದ್ದಿ, ಹೇಮಂತ ಗುಂಜೀಕರ, ನಯನ ಇಂಗಳೆ, ವಿಕ್ರಮ ಸಾಲಗಾಂವ್ಕರ, ಮಾರುತಿ ಪ್ರಭು, ಸದಾನಂದ ಶಾನಭಾಗ, ಮಾದವ ನಾಯಕ, ದತ್ತಾ ಬದ್ದಿ, ಪವನ ಕಾಮತ, ಮೂರ್ತಿ ಗುಡಿಗಾರ, ನಮೀತಾ ಬೀಡಿಕರ, ಲಕ್ಯಾ ಕಿತ್ತೂರು, ಚಂದ್ರಕಾಂತ ಕಿತ್ತೂರು, ನಾಗರಾಜ ಆಚಾರಿ, ಬಾಬು ಗುಡಿಗಾರ, ರಮಣ ಅಸೂಕರ ಅವರು, ರಾತ್ರಿ ಹಗಲು ಎನ್ನದೆ ಸುಣ್ಣ ಬಣ್ಣ ಅಲಂಕಾರ ಸಂಪೂರ್ಣ ಹೂವಿನ ಮಂಟಪ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
..