


ಪ್ರಸ್ತುತ 42ನೇ ವರ್ಷದ ಗಜಾನನೋತ್ಸವದ ಸಂಭ್ರಮವನ್ನು ಯಶಸ್ವಿಯಾಗಿ ನಡೆಸುತ್ತಿರುವ ಸಮಿತಿ, ದೇವರಿಗೆ ನಾನಾ ಬಗೆಯ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಸಮರ್ಪಿಸುತ್ತಿರುವುದು ವಿಶೇಷವಾಗಿದ್ದು, ಧಾರ್ಮಿಕ ಸೇವೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದೆ.
ಪ್ರತಿದಿನ ಗಣಹವನ, ಪ್ರತಿನಿತ್ಯ ಅನ್ನಸಂತರ್ಪಣೆ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡಿರುವ ಈ ಸಮಿತಿಯು ಯಲ್ಲಾಪುರದ ಇತಿಹಾಸದಲ್ಲಿಯೇ ಗಮನಾರ್ಹ ಸ್ಥಾನ ಪಡೆದಿದೆ. ಮೂರು ದಶಕಗಳ ಹಿಂದಿನ ಪಿಎಸ್ಐ ಆರ್ ಆರ್ ಪಾಟೀಲ್ ಹಾಗೂ ಅವರ ಸಿಬ್ಬಂದಿವರ್ಗ ಪ್ರಾಯೋಜಿತ ಸಂಗೀತ ಕಾರ್ಯಕ್ರಮವು ಜನತೆಯ ಮನಸ್ಸಿನಲ್ಲಿ ಇಂದಿಗೂ ತಾಜಾವಾಗಿದೆ.
ಪ್ರಸಕ್ತ 42ನೇ ಗಜಾನನೋತ್ಸವಕ್ಕೆ ಮುನ್ನಡೆಯುತ್ತಿರುವ ಪದಾಧಿಕಾರಿಗಳಾದ ಅಧ್ಯಕ್ಷ ಗಣೇಶ ಪತ್ತಾರ್, ಗೌರವಾಧ್ಯಕ್ಷ ಉಲ್ಲಾಸ ಪ್ರಭು, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹಿಸ್ಕೇರಿ, ಸಹ ಕಾರ್ಯದರ್ಶಿಗಳಾದ ಮಾರುತಿ ಎಂ ನಾಯ್ಕ, ರವಿ ಭಜಂತ್ರಿ, ಕೋಶ್ಯಾಧ್ಯಕ್ಷ ರವಿ ಶಾನಭಾಗ, ಪೂಜಾ ವಿಭಾಗದ ಪ್ರಮುಖರಾದ ಪುಂಡಲೀಕ ಶೆಟ್ಟಿ, ವೆಂಕಟೇಶ್ ರಾಯ್ಕರ, ಗುರುರಾಜ್ ಕುರ್ಡೇಕರ, ಅಮಿತ್ ಉದಯ ರೇವಣಕರ, ದೇಣಿಗೆ ವಿಭಾಗದ ವಿಜಯಶಂಕರ ಜಿ ನಾಯಕ, ಸಚಿನ ಶಾನಭಾಗ, ಪ್ರಶಾಂತ ದುರಂದರ, ಪೆಂಡಾಲ್ ನಿರ್ವಹಣೆ ಹಾಗೂ ಉಸ್ತುವಾರಿ ವಿಭಾಗದ ಹನುಮಂತ ನೇರಲಗಿ, ಸೂರಜ ಶೆಟ್ಟಿ, ಪ್ರವೀಣ್ ಪಾಯದೆ, ಅಲಂಕಾರ ಸಮಿತಿಯ ರವಿ ಶಾನಭಾಗ, ಅಮೃತ ಬದ್ದಿ, ನಯನ ಇಂಗಳೆ, ಸಾಂಸ್ಕೃತಿಕ ಮತ್ತು ಮನರಂಜನಾ ಸಮಿತಿಯ ವಿಶ್ವೇಶ್ವರ ಹೆಬ್ಬಾರ್ ಅಲೇಪಾಲ್, ಅನ್ನ ಸಂತರ್ಪಣೆ ಮತ್ತು ಸವಾಲುಗಳ ನಿರ್ವಹಣಾ ಸಮಿತಿಯ ಸುಬ್ರಾಯ ಶೆಟ್ಟಿ, ನಾಗೇಶ ರಾಯ್ಕರ, ರವಿ ಎಂ ಶೆಟ್ಟಿ, ಲೆಕ್ಕಪತ್ರ ನಿರ್ವಹಣಾ ಸಮಿತಿಯ ಪ್ರೇಮಾನಂದ ಭಂಡಾರಿ, ಅರ್ಚಕರಾದ ದತ್ತಾತ್ರೇಯ ಭಟ್ ಸಬಾಹಿತಮನೆ, ಇನ್ನೂ ಮುಂತಾದವರು ಸಕ್ರಿಯವಾದ ಕಾರ್ಯ ದೇವಿ ಮೈದಾನ ಗಜಾನನೋತ್ಸವ ಸಮಿತಿ ಇನ್ನಷ್ಟು ಯಶಸ್ಸಿನತ್ತ ನತ್ತ ಸಾಗುವಂತೆ ಮಾಡಿದೆ.


ಒಟ್ಟಾರೆ ಶ್ರೀದೇವಿ ಮೈದಾನ ಗಜಾನನೋತ್ಸವ ಸಮಿತಿಯವರು ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಕಾರ್ಯ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯಲ್ಲಾಪುರದ ಮನೆ ಮನ ಗೆದ್ದಿರುವುದು ಸುಳ್ಳಲ್ಲ.
ಸಮಿತಿಯ ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಸಹಕಾರದಿಂದ, ಗಜಾನನೋತ್ಸವ ಸಮಿತಿ ಶ್ರೇಷ್ಠ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದು, ತನ್ನ 42 ವರ್ಷಗಳ ಯಶಸ್ಸಿನ ಮೂಲಕ ಸುವರ್ಣ ಮಹೋತ್ಸವದತ್ತ ಹೆಜ್ಜೆ ಹಾಕುತ್ತಿದೆ.
.
.
.