ಯಲ್ಲಾಪುರ : ಇಲ್ಲಿಯ ಎಪಿಎಂಸಿ ಆವಾರದಲ್ಲಿ ಶ್ರೀತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಶ್ರೀಮಾತಾ ಕಂಪನಿ ಹಾಗೂ ಮಾತ್ರ ಮಂಡಳಿಯೊಂದಿಗೆ ಸೇರಿ ನಡೆಸಲಾದ “ಸಸ್ಯ ಸಂಭ್ರಮ 24” ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉಧ್ಘಾಟಿಸಿದ ಜಂಬೆಸಾಲಿನ ಕೃಷಿ ಸಕಿ ಪ್ರಶಸ್ತಿ ಪುರಸ್ಕೃತ ಶ್ರೀಲತಾ ರಾಜೀವ, ಮಹಿಳೆಯರು ತಮ್ಮ ದಿನನಿತ್ಯದ ಕೆಲಸದಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಜೀವನದಲ್ಲಿ ಸಂತಸ ಮತ್ತು ಸಾಧನೆಯನ್ನು ಸಾಧಿಸಬಹುದು ಎಂದು ಹೇಳಿದರು.
ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಮ್ಮ ಜೀವನಕ್ಕೆ ಸಸ್ಯಗಳ ಮಹತ್ವವನ್ನು ವಿವರಿಸುತ್ತಾ, ಅಕ್ಷರ ಜ್ಞಾನದ ಜೊತೆಗೆ ಸಸ್ಯ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಮಹಿಳೆಯರನ್ನು ಪ್ರೇರೇಪಿಸಿದರು. ಶ್ರೀಲತಾ ಮತ್ತು ಗಿರಿಜಾ ಗುರುಪ್ರಸಾದ್, ಸಣ್ಣ ವಯಸ್ಸಿನಲ್ಲಿಯೇ ಸಾಧಕರಾಗಿ ಸಮಾಜಕ್ಕೆ ಆದರ್ಶಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಗಿರಿಜಾ ಗುರುಪ್ರಸಾದ್, ತಮ್ಮ ಶಿಕ್ಷಕರ ಸನ್ನಿಧಿಯಲ್ಲಿ ಸನ್ಮಾನ ಸಂತಸ ತಂದಿದೆ ಎಂದು ಹೇಳಿ, ತಮ್ಮ ಪತಿಯ ಅನಾರೋಗ್ಯದ ಸಮಯದಲ್ಲಿ ಧೈರ್ಯದಿಂದ ತಿಂಡಿ ತಿನಿಸುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾದ ಕಥೆಯನ್ನು ಹಂಚಿಕೊಂಡರು.
ಶ್ರೀಮಾತಾ ಕಂಪನಿಯ ಬಾಗಿದಾರ ಶ್ರೀಪಾದ್ ಮಣ್ಣಮನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗೀತಾ ಭಟ್ ಆನಗೋಡ, ಶ್ವೇತಾ ಗೇರಗದ್ದೆ, ಪ್ರೇಮ ಹೆಗ್ಗಾರ್ ಮತ್ತು ರಶ್ಮಿ ಹೆಗಡೆ ಕುಂಬ್ರಿ ಉತ್ತಮ ಗಿಡ ಬೆಳೆಸಿದ್ದಕ್ಕಾಗಿ ಬಹುಮಾನ ಪಡೆದರು.
ಮಾತೆಯರು ಗೀತಾ ಪಠಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಸಂಸ್ಥೆಯ ಕಾರ್ಯದರ್ಶಿ ಗಾಯತ್ರಿ ಬೋಳುಗುಡ್ಡೆ ಸ್ವಾಗತಿಸಿದರು. ಅಧ್ಯಕ್ಷ ಜಾನವಿ ಮಣ್ಣಮನೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಧ್ಯಾ ಕೊಂಡದಕುಳಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶ್ರೀರಂಗ ಕಟ್ಟಿ, ವಿ ಎಸ್ ಭಟ್ಟ ಮತ್ತು ಶಾಂತಲಾ ಹೆಗಡೆ ನಿರ್ಣಾಯಕರಾಗಿದ್ದರು. ಕವಿತಾ ಬೋಳುಗುಡ್ಡೆ ಸನ್ಮಾನ ಪತ್ರ ವಾಚಿಸಿದರು.