ಯಲ್ಲಾಪುರ : ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ, 2022 ಜುಲೈ 1ರಿಂದ 2024 ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ಯಲ್ಲಾಪುರ ತಾಲೂಕಿನ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮಗೆ ನಿವೃತ್ತಿ ಸೌಲಭ್ಯಗಳನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳವಾರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ನಿವೃತ್ತರಾದ ನೌಕರರ ಪ್ರಸ್ತುತ ಸೇವೆಯಲ್ಲಿ ಇದ್ದ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯ ಲಭ್ಯವಿದೆ. ಆದರೆ 2022 ರಿಂದ 2024ರ ಅವಧಿಯಲ್ಲಿ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರರಿಗೆ ಈ ಸೌಲಭ್ಯವಿಲ್ಲ. ನಿವೃತ್ತ ನೌಕರರು ತಮ್ಮ ಮನವಿಯಲ್ಲಿ, 2022 ಜುಲೈ 1ರಿಂದಲೇ ಅವರ ನಿವೃತ್ತಿ ವೇತನ ಪರಿಷ್ಕೃತ ವೇತನ ಶ್ರೇಣಿಯಲ್ಲಿಯೇ ಲೆಕ್ಕಹಾಕಿ, ಸೇವಾ ಅವಧಿಯ ಅಂತಿಮ ಲೆಕ್ಕಾಚಾರ ಮಾಡಬೇಕೆಂದು ತಿಳಿಸಿದ್ದಾರೆ. ಹಾಗೆಯೇ, ಆರ್ಥಿಕ ನಷ್ಟವನ್ನು ಪರಿಗಣಿಸಿ, ಅವರು ಸಂಬಾಳಿಸಿದ್ದ ಹಣದ ವ್ಯತ್ಯಾಸವನ್ನು(ಅರಿಯರ್ಸ್) ಕೇಳದೇ, ಈ ಶ್ರೇಣಿಗಳ ಲೆಕ್ಕಾಚಾರವೇ ಸರಿ ಮಾಡಲು ಸರ್ಕಾರದ ಸಹಾಯಕ್ಕಾಗಿ ಕೋರಿದ್ದಾರೆ.
ನಿವೃತ್ತ ನೌೌಕರರ ಸಂಘದ ತಾಲೂಕಾ ಸಂಚಾಲಕ ಎಂ ಬಿ ಶೇಟ್, ಅಧ್ಯಕ್ಷ ಎಸ್. ಎಲ್ .ಜಾಲಿಸತ್ಗಿ, ಕಾರ್ಯದರ್ಶಿ ಗೋಪಾಲ ನೇತ್ರೆಕರ, ಸುನಂದಾ ಪಾಠಣಕರ, ನಿವೃತ್ತ ಶಿಕ್ಷಕರಾದ ಬಾಬು ಸ್ವಾಮಿ, ಚಂದ್ರಕಾಂತ ಹನುಮರೆಡ್ಡಿ, ಶಿವಾನಂದ ನಾಯಕ, ಜಗದೀಶಚಂದ್ರ ನಾಯ್ಕರ, ಅಶೋಕ ಬಂಟ್, ರಾಮಕೃಷ್ಣ ದೇಶಭಂಡಾರಿ, ಸುನಂದಾ ಜಿ ಭಟ್, ಮಹಾದೇವಿ ಭಟ್, ನಳಿನಿ ಹೆಗಡೆ, ಸಂತೋಷ ಶೇಟ್, ಎಸ್ ಟಿ ಭಟ್ ಮಂತಾದವರು ಇದ್ದರು.