ಯಲ್ಲಾಪುರ : ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಸಲಾಯಿತು. ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಲೋಕ ಅದಾಲತ ಮೂಲಕ 180 ಪ್ರಕರಣ ಇತ್ಯರ್ಥ 50,775,229 ರೂಪಾಯಿ ಹಣ ಭರಣ ಮಾಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ ರವರ ನೇತ್ರತ್ವದಲ್ಲಿ ದಾಖಲಾಗಿದ್ದ 115 ಪ್ರಕರಣಗಳಲ್ಲಿ 25 ಪ್ರಕರಣ ಇತ್ಯರ್ಥಗೊಂಡು 84,82,032 ರೂಪಾಯಿ ಭರಣವಾಯಿತು.
ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ರವರ ನೇತ್ರತ್ವದಲ್ಲಿ ದಾಖಲಾಗಿದ್ದ 488 ಪ್ರಕರಣಗಳಲ್ಲಿ 155 ಪ್ರಕರಣ ಇತ್ಯರ್ಥ ಮಾಡಿ, 4,22,93,197 ರೂಪಾಯಿ ಹಣ ಭರಣ ಮಾಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಂದಾನಕಾರರಾಗಿ ವಕೀಲರಾದ ಶ್ರೀಕಾಂತ ಚೌಹ್ವಾಣ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ವಕೀಲರಾದ ಸರಸ್ವತಿ ಜಿ ಭಟ್ಟ ಕಾರ್ಯ ನಿರ್ವಹಿಸಿದರು.
ಅಪರ ಸರಕಾರಿ ವಕೀಲರಾದ ಎನ್ ಟಿ ಗಾಂವ್ಕರ್, ಸಹಾಯಕ ಸರಕಾರಿ ಅಭಿಯೋಜಕರಾದ ಝೀನತ್ ಬಾನು ಶೇಖ, ನ್ಯಾಯಾಲಯದ ಎಲ್ಲ ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಆರಕ್ಷಕರು, ಬ್ಯಾಂಕ್ ಹಾಗೂ ಸೊಸೈಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.
.
.
.