ಯಲ್ಲಾಪುರ : ಶಿರನಾಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯು ವಿಜೃಂಭಣೆಯೊಂದಿಗೆ ಆಚರಿಸಲಾಯಿತು. ಈ ಸಂದರ್ಭ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಭಾಕರ ಮರಾಠಿ ಅವರು ಧ್ವಜಾರೋಹಣ ನೆರವೇರಿಸಿದರು.
ಪುಟಾಣಿ ಮಕ್ಕಳ ಕಲಾವಿದರಾಗಿ ಸ್ವಾತಂತ್ರ್ಯ ಹೋರಾಟಗಾರರ ಛದ್ಮ ವೇಷದಲ್ಲಿ ಪ್ರದರ್ಶಿಸಿದ ನಾಟಕವು ಸಕಲರ ಗಮನ ಸೆಳೆದಿತು. ನಿಕಟ ಪೂರ್ವ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ ಮರಾಠಿ ಮತ್ತು ಉಪಾಧ್ಯಕ್ಷೆ ರೇಷ್ಮಾ ಬಂಕಾಪುರ ಅವರ ನಿಸ್ವಾರ್ಥ ಸೇವೆ ಹಾಗೂ ಕಾರ್ಯವೈಖರಿಗೆ ನೂತನ ಎಸ್ ಡಿ ಎಂ ಸಿ ಹಾಗೂ ಶಿಕ್ಷಕರು ಮತ್ತು ಪಾಲಕರು ಅವರನ್ನು ಸನ್ಮಾನಿಸಿದರು.
ಮುಖ್ಯ ಶಿಕ್ಷಕರಾದ ಎಸ್ ಜಿ ಭಟ್ ಸ್ವಾಗತಿಸಿದರು, ಸತೀಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಆಶಾ ಶೆಟ್ಟಿ ವಂದನೆ ಸಲ್ಲಿಸಿದರು. ಉಪಾಧ್ಯಕ್ಷೆ ಮಂಜುಳಾ ಮರಾಠಿ, ಅತಿಥಿ ಶಿಕ್ಷಕ ಸುಬ್ರಮಣ್ಯ ಪೂಜಾರಿ, ಪಾಲಕ ವರ್ಗ ಹಾಗೂ ಮಕ್ಕಳು ಭಾಗವಹಿಸಿದ್ದರು.
ಯಲ್ಲಾಪುರ: ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ್ ಗೊಂದ್ಲಿಯವರು ಧ್ವಜಾರೋಹಣ ನೆರವೇರಿಸಿ, ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಸ್ಮರಿಸಿದರು.
"ದೇಶಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನಗಳಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ದೇಶದ ಪ್ರಗತಿಗೆ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ಸಲ್ಲಿಸೋಣ" ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಾ ಹಾರವಾಡೇಕರ ಅಧ್ಯಕ್ಷತೆವಹಿಸಿದ್ದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ಶಶಿಕಲಾ ಅಂಬೀಗ, ಸದಸ್ಯರಾದ ದ್ಯಾಮಣ್ಣ ಬೋವಿವಡ್ಡರ, ಮಾರುತಿ ಭೋವಿವಡ್ಡರ್, ಸಂದೀಪ ವಡ್ಡರ್ ನಾಗರಾಜ ಕೊರ್ನಳ್ಳಿ, ರವಿ ನಾಯ್ಕ, ಸುಚಿತ್ರಾ ಮರಾಠೆ, ಶ್ರೀನಿವಾಸ, ಪಾಲಕರಾದ ಪ್ರಕಾಶ ಕಟ್ಟಿಮನಿ, ಶಿಕ್ಷಕರಾದ ಶೋಭಾ ಗಣಪತಿ ಹಾಗೂ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯಲ್ಲಾಪುರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ತಾಲೂಕಾ ಕಸಾಪ ಅಧ್ಯಕ್ಷರಾದ ವಿದ್ವಾನ್ ಸುಬ್ರಹ್ಮಣ್ಯ ಭಟ್ ಅವರು ಧ್ವಜಾರೋಹಣ ನೆರವೇರಿಸಿ, ನೆರೆದಿದ್ದ ಸದಸ್ಯರಿಗೆ ಶುಭಾಶಯ ತಿಳಸೀದರು. ಆಜೀವ ಸದಸ್ಯರಾದ ಬೀರಣ್ಣ ನಾಯಕ ಮೊಗಟಾ, ಶ್ರೀರಂಗ ಕಟ್ಟಿ, ಡಿ.ಜಿ.ಹೆಗಡೆ, ಕೃಷ್ಣ ಭಟ್ಟ ನಾಯಕನಕೆರೆ, ಸುರೇಶ ಬೋರ್ಕರ್, ಜಿ.ಕೆ.ಭಟ್ಟ ಜಂಬೆ, ಎನ್.ಎಸ್.ಭಟ್ಟ, ವಿಶಾಲಾಕ್ಷಿ ಭಟ್ಟ, ಕೆ.ಜಿ.ನಾಯಕ, ಶ್ರೀಧರ ಅಣಲಗಾರ, ಶಂಕರ ಭಟ್ಟ ತಾರಿಮಕ್ಕಿ, ವಿಶ್ವೇಶ್ವರ ಗಾಂವ್ಕಾರ್, ಎಂ.ಡಿ.ಗೌಸ್ ಹಾಗೂ ಖಜಾಂಚಿಗಳಾದ ಡಿ.ಎನ್.ಗಾಂವ್ಕಾರ್ ಇದ್ದರು.