ಯಲ್ಲಾಪುರ : ವಿಶ್ವದರ್ಶನ ವಿದ್ಯಾ ಸಂಸ್ಥೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಪಾಲಕರ ವಾಹನಗಳು ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಂಕೋಲೆಕರ ಅವರು ಪೊಲೀಸ್ ಉಪ ನಿರೀಕ್ಷಕ ಸಿದ್ದಪ್ಪ ಗುಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
ಬಹಳಷ್ಟು ವಾಹನಗಳ ಒಂದೆ ಸಲ ಹೊರ ಬರುವುದರಿಂದ ಮಕ್ಕಳು ಮತ್ತು ಪಾದಚಾರಿಗಳಿಗೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಆದ್ದರಿಂದ, ಪಾಲಕರು ವಿದ್ಯಾರ್ಥಿಗಳನ್ನು ಶಾಲಾ ಆವರಣದೊಳಗೆ ಬಿಟ್ಟು ಹೋಗುವ ಮತ್ತು ಅವರನ್ನು ಮೈದಾನದಿಂದಲೇ ಕರೆದುಕೊಂಡು ಹೋಗುವ ವ್ಯವಸ್ಥೆ ಜಾರಿಗೊಳಿಸುವಂತೆ ಸಂಸ್ಥೆಯ ಪ್ರಾಂಶುಪಾಲರಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ.
ವಿಶ್ವದರ್ಶನದ ಎದುರು ಅಕ್ಕಪ್ಕದಕದಲ್ಲಿ ಹೊಟೇಲ್‌ಗಳ ಮುಂದೆ ವಾಹನ ನಿಲುಗಡೆಗೂ ಅಂಕೋಲೆಕರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೊಟೇಲ್‌ಗಳ ಗ್ರಾಹಕರು ವಾಹನಗಳನ್ನು ಕಡ್ಡಾಯವಾಗಿ ಹೊಟೇಲ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವಂತೆ ಮಾಲೀಕರಿಗೆ ಸೂಚಿಸಬೇಕು ಎಂದು ಮನವಿ ಮಾಡಲಾಗಿದೆ.