ಯಲ್ಲಾಪುರ: 2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಕಂಡಿದ್ದ ಕಳಚೆಯಲ್ಲಿ ಶನಿವಾರ ರಾತ್ರಿ ಮತ್ತೆ ಕುಸಿತವಾಗಿದೆ.
ಕಳಚೆಯ ಮಾನಿಗದ್ದೆ ಕುಂಬ್ರಿಯ ಕಮಲಾಕರ್ ಭಾಗ್ವತ್ ಅವರ ಮನೆ ಮುಂದೆ ದೊಡ್ಡ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಜನಾರ್ದನ ಹೆಬ್ಬಾರ್ ಅವರ ತೋಟ ಮಣ್ಣು ಪಾಲಾಗಿದೆ. ಉದಯ್ ಐತಾಳ್ ಅವರ ಮನೆ ಪಕ್ಕದಲ್ಲಿ ಸಹ ಭೂಮಿ ಸಡಿಲಗೊಂಡಿದ್ದು, ಹಂತ ಹಂತವಾಗಿ ಮಣ್ಣು ಕುಸಿಯುತ್ತಿದೆ.
ಸಡಿಲವಾದ ಮಣ್ಣು ಈಗಲೂ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಕುಸಿಯುತ್ತಲೇ ಇದೆ. ಮಳೆ ಜಾಸ್ತಿಯಾದರೆ ಮತ್ತೇನು ಆಗಲಿದೆಯೋ ಎಂಬ ಆತಂಕದಲ್ಲೇ ಗ್ರಾಮಸ್ಥರಿದ್ದಾರೆ.