ಯಲ್ಲಾಪುರ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯಲ್ಲಾಪುರ ಮಂಡಳ ಯುವ ಮೋರ್ಚಾ ಸಹಯೋಗದೊಂದಿಗೆ “ವಿಭಜನಾ-ವಿಭಿಷಣ ಸ್ಮೃತಿ ದಿವಸ” ಆಚರಣೆ ಅಂಗವಾಗಿ ಪಂಜಿನ ಮೆರವಣಿಗೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಆಗಸ್ಟ್ 14 ರಂದು, ಸಂಜೆ 6.00 ಗಂಟೆಗೆ ಯಲ್ಲಾಪುರದ ಪೊಲೀಸ್ ವಸತಿ ಗ್ರಹದ ಸಮೀಪದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಳ್ಳಲಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವೆಂಕಟ್ರಮಣ ಬೆಳ್ಳಿ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ. “ವಿಭಜನಾ-ವಿಭಿಷಣ ಸ್ಮೃತಿ ದಿವಸ” ಅಂಗವಾಗಿ, ದೇಶವಿಭಜನೆಯ ಸ್ಮರಣೆ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೊಂಡವರಿಗೆ ಗೌರವ ಸಲ್ಲಿಸುವ ಉದ್ದೇಶವನ್ನು ಹೊಂದಿ, ಈ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯು ಯಲ್ಲಾಪುರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಮೂಲಕ, ಯಲ್ಲಾಪುರದ ಜನತೆಗೆ ಸ್ವಾತಂತ್ರ್ಯ ದಿನದ ಮಹತ್ವವನ್ನು ನೆನಪಿಸುವ ಪ್ರಯತ್ನ ಮಾಡಲಾಗುತ್ತದೆ.
ಕಾರ್ಯಕ್ರಮದ ಆಯೋಜಕರು ಸ್ಥಳೀಯ ಯುವಕರು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ, ಯುವ ಮೋರ್ಚಾ ಸದಸ್ಯರು ಸಹಕರಿಸುತ್ತಿದ್ದು, ಈ ಮೆರವಣಿಗೆಗೆ ಸಂಭ್ರಮದ ವಾತಾವರಣ ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದಾರೆ.