ಯಲ್ಲಾಪುರ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಕ್ಕೆ ಹೊಸ ಆಯಾಮ ಸಿಕ್ಕಿದೆ. ಕಾಲೇಜಿನ ಮಧ್ಯ ಭಾಗದಲ್ಲಿ ಹೊಸ ಧ್ವಜ ಸ್ಥಂಭ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಪ್ರಾಂಶುಪಾಲರಾದ ಆರ್.ಡಿ. ಜನಾರ್ಧನ್ ಈ ಕುರಿತು ಮಾಹಿತಿ ನೀಡಿ, "ಸ್ವಾತಂತ್ರ್ಯೋತ್ಸವದ ಸಮಾರಂಭಕ್ಕೆ ವಿಶಾಲ ಸ್ಥಳಾವಕಾಶದ ಅಗತ್ಯವನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದೆ ಕಾಲೇಜಿನ ಮುಂಭಾಗದಲ್ಲಿ ಧ್ವಜ ಸ್ಥಂಭ ಇದ್ದಿದ್ದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈಗ ಕಾಲೇಜಿನ ಅವರಣದ ಮಧ್ಯಭಾಗದಲ್ಲಿ ಸ್ಥಾಪಿಸಲಾಗಿರುವ ಧ್ವಜ ಸ್ಥಂಭದಿಂದ ಸಾರ್ವಜನಿಕರು, ಹಾಸ್ಟೆಲ್ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಸುಲಭವಾಗಿ ಸಂಚರಿಸಬಹುದಾಗಿದೆ." ಎಂದು ತಿಳಿಸಿದರು.
ಈ ಹೊಸ ಬದಲಾವಣೆಯಿಂದ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಆಗಮಿಸುವ ಅತಿಥಿಗಳಿಗೆ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮವನ್ನು ಹೆಚ್ಚು ಆನಂದಿಸಲು ಅವಕಾಶ ಸಿಕ್ಕಿದೆ.