Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Wednesday, 14 August 2024

ಅರಿಷಿಣ ಕುಂಕುಮ: ಅಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯ/ ನಾಳೆ ರಾಷ್ಟ್ರಮೌಲ್ಯ ಮತ್ತು ಜಾಗೃತಿ - ಕೃತಿ ಬಿಡುಗಡೆ ಸಮಾರಂಭ

ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮತ್ತು ವಿಹಿಂಪ ಮಾತೃಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಅರಿಷಿಣ ಕುಂಕುಮ ಕಾರ್ಯಕ್ರಮವು ಬುಧವಾರ ಸಂಜೆ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಭವ್ಯವಾಗಿ ನಡೆಯಿತು.
   ಈ ಸಂದರ್ಭದಲ್ಲಿ ಭಗವದ್ಗೀತಾ ಅಭಿಯಾನದ ರಾಜ್ಯ ಸಂಚಾಲಕಿ ಪೂರ್ಣಿಮಾ ಮಂಜುನಾಥ ಜನ್ನು ಅವರು ಮಾತನಾಡಿ, ಈ ಕಾರ್ಯಕ್ರಮವು ಅಧ್ಯಾತ್ಮಿಕತೆ ಮತ್ತು ನಮ್ಮ ಸಂಸ್ಕೃತಿಯ ಸಕಾರಾತ್ಮಕ ಮೌಲ್ಯಗಳನ್ನು ಪಸರಿಸುವ ಮೂಲಕ ಸಮಾಜವನ್ನು ಸುಧಾರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
   "ಸ್ವಾತಂತ್ರ್ಯ ಪೂರ್ವದಲ್ಲಿಯೂ ಹೋರಾಟಗಾರರು ಸಾಮೂಹಿಕ ಗಣೇಶೊತ್ಸವ ಮೂಲಕ ಒಗ್ಗಟ್ಟನ್ನು ಬಲಪಡಿಸುವ ಜೊತೆಗೆ ಅಧ್ಯಾತ್ಮಿಕತೆಯನ್ನು ಸಂಘಟನೆಗೆ ಬಳಸಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಪ್ರಸ್ತುತವೆನಿಸುತ್ತಿವೆ," ಎಂದು ಅವರು ತಿಳಿಸಿದರು.
    ವಿದ್ವಾನ ಅನಂತಭಟ್ಟ ಶಿಗೇಪಾಲ ಅವರ ನೇತ್ರತ್ವದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ ಮತ್ತು ಲಲಿತಾ ಅಷ್ಟೋತ್ತರ ಪಠಣ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತೃಮಂಡಳಿ ಅಧ್ಯಕ್ಷೆ ನಮಿತಾ ಬೀಡಿಕರ, ಉದ್ಯಮಿ ಮಂಜುನಾಥ ಜನ್ನು, ವಿಹಿಂಪ ತಾಲೂಕಾಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
   ಪಟ್ಟಣದ ವೈದ್ಯೆ ಡಾ. ಕವಿತಾ ಹೆಗಡೆ ಮತ್ತು ಕೊಡುಬಳೆ ಚಕ್ಕುಲಿ ಮಾಡುವ ಮೂಲಕ ಸ್ವ್ವದ್ಯೋಗ ಮಾಡುತ್ತಿರುವ ಗಿರಿಜಾ ಗುರುಪ್ರಸಾದ, ವಿಹಿಂಪ ನೂತನ ಅಧ್ಯಕ್ಷ ಗಜಾನನ ಭಟ್ಟ,  ಪೂರ್ಣಿಮಾ ಮಂಜುನಾಥ ಜನ್ನು ಮತ್ತು ಮಂಜುನಾಥ ಜನ್ನು ದಂಪತಿಗಳನ್ನು  ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದೇವಿಗೆ ಸಮಿತಿಯಿಂದ ವಿಶೇಷ ಪೂಜೆ ಉಡಿ ಸಲ್ಲಿಸಲಾಯಿತು. ಸಂಚಾಲಕ ರಾಮುನಾಯ್ಕ ಅವರು ಪ್ರಾಸ್ತವಿಕ ಮಾತನಾಡಿದರು. ಶಶಿಕಲಾ ಅಂಬಿಗ ಅವರು ಪ್ರಾರ್ಥಿಸಿದರು. ಕಾರ್ಯದರ್ಶಿ ಶ್ಯಾಮಿಲಿ ಪಾಠಣಕರ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷಿ ಮುರ್ಕುಂಬಿ ಅವರು ಸ್ವಾಗತಿಸಿದರು, ಶೋಭಾ ಹುಲಮನಿ ಅವರು ವಂದಿಸಿದರು. ವೀಣಾ ಯಲ್ಲಾಪುರಕರ ಮತ್ತು ಆರತಿ ನಾಯ್ಕ ಅವರು ಸನ್ಮಾನಿತರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯೆ ಕಲ್ಪನಾ ನಾಯ್ಕ, ಪತ್ರಕರ್ತೆ ಪ್ರಭಾ ಜಯರಾಜ, ಇನ್ನಿತರರು ಇದ್ದರು.
    ಮಾತೃಮಂಡಳಿ ಸದಸ್ಯೆಯರು ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು ನೂರಕ್ಕೂ ಅಧಿಕ ಮಹಿಳೆಯರಿಗೆ ಅರಿಷಿಣ ಕುಂಕುಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವು ಅಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯಕ್ಕೆ ಸಾಕ್ಷಿಯಾಗಿತ್ತು.

ನಾಳೆ ರಾಷ್ಟ್ರಮೌಲ್ಯ ಮತ್ತು ಜಾಗೃತಿ - ಕೃತಿ ಬಿಡುಗಡೆ ಸಮಾರಂಭ

ಯಲ್ಲಾಪುರ : ಕನ್ನಡ ಸಾಹಿತ್ಯ ಪರಿಷತ್‌ ಯಲ್ಲಾಪುರ ಘಟಕವು ಆಗಸ್ಟ್ 15 ರಂದು 'ರಾಷ್ಟ್ರಮೌಲ್ಯ ಮತ್ತು ಜಾಗೃತಿ' ಕುರಿತ ಕೃತಿಯ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ. ಸಮಾರಂಭವು ಗಣಪತಿಗಲ್ಲಿಯ ವಿದ್ಯಾಗಮ ಕಲಾಮಂದಿರದಲ್ಲಿ ನಡೆಯಲಿದೆ.

   ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಕೃತಿಯನ್ನು ಬಿಡುಗಡೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅಧ್ಯಕ್ಷತೆ ವಹಿಸುವರು. ಕೃತಿಯ ಪರಿಚಯವನ್ನು ನಾಗೇಶ ವರದಿಗಾರ ಕೇಬಲ್ ನಾಗೇಶ ಮಾಡಲಿದ್ದಾರೆ.
  ಜಿಲ್ಲಾ ಪ್ರಾ ಶಾ ಶಿ ಸಂಘದ ಅಧ್ಯಕ್ಷ ನಾರಾಯಣ ಎಚ್ ನಾಯಕ, ಯಲ್ಲಾಪುರ ಪ್ರಾ ಶಾ ಶಿ ಸಂಘದ ಅಧ್ಯಕ್ಷ ಆರ್ ಆರ್ ಭಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
   ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಗಣಪತಿಗಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುನಿಲ್ ಎನ್ ಯಲ್ಲಾಪುರಕರ ಗೌರವ ಉಪಸ್ಥಿತಿಯಲ್ಲಿರುವರು.
  ಎಂದು ಕೃತಿಯ ಲೇಖಕ ರಾಮಚಂದ್ರ ಐ. ನಾಯ್ಕ ತಿಳಿಸಿದ್ದಾರೆ.