ಯಲ್ಲಾಪುರ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಯಲ್ಲಾಪುರದ ತಹಶೀಲ್ದಾರ ಕಚೇರಿಯಯನ್ನು ವಿಶಿಷ್ಟವಾಗಿ ಅಲಂಕರಿಸಲಾಗಿದೆ. ಈ ವರ್ಷದ ಸ್ವಾತಂತ್ರ್ಯೋತ್ಸವವನ್ನು ಹೆಚ್ಚುವರಿ ವಿಜೃಂಭಣೆಯೊಂದಿಗೆ ಆಚರಿಸಲು, ಕಚೇರಿಯ ಮುಂಬಾಗವನ್ನು ತ್ರಿವರ್ಣ ಧ್ವಜವನ್ನು ಹೋಲುವ ಕೆಸರಿ ಬಿಳಿ ಹಸಿರು ಬಣ್ಣದ ವಿದ್ಯುತ್ ದೀಪ(ಎಲ್‌ಇಡಿ) ಅಲಂಕರಿಸಲಾಗಿದೆ.
ಸ್ವತಂತ್ರೋತ್ಸವ ಉತ್ಸವದ ಅಂಗವಾಗಿ, ಕಚೇರಿ ಸುತ್ತಲೂ ಇರುವ ವಿದ್ಯುತ್ ದೀಪಗಳು ತ್ರಿವರ್ಣ ಧ್ವಜದ ಚಿತ್ರಣವನ್ನು ಪ್ರತಿಬಿಂಬಿಸುತ್ತವೆ.
ಈ ದೃಶ್ಯ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಸಂಚರಿಸುವ ವಾಹನಗಳ ಪ್ರಯಾಣಿಕರು ಹಾಗೂ ಚಾಲಕರಿಗೆ ರಾತ್ರಿಯ ಸಂದರ್ಭದಲ್ಲಿ ಬಹಳಷ್ಟು ಆಕರ್ಷಿಸುತ್ತಿದೆ. ಕಚೇರಿ ಪ್ರವೇಶದ ಪ್ರದೇಶವನ್ನು ಸಂಭ್ರಮದಿಂದ ತುಂಬಿಸಿದೆ. ಕಚೇರಿಯ ಮುಖ್ಯ ದ್ವಾರ ಇನ್ನಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದೆ.