Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Thursday, 8 August 2024

ಬಿಜೆಪಿ ಪಾದಯಾತ್ರೆ ಯಲ್ಲಾಪುರ ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡನೆ:

ಯಲ್ಲಾಪುರ: ರಾಜ್ಯದಲ್ಲಿ ಬಡವರ ಮತ್ತು ಶೋಷಿತರ ಬಾಳಿಗೆ ಬೆಳಕಾಗಬಲ್ಲ 'ಪಂಚ ಗ್ಯಾರಂಟಿ'ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು, ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ರಾಜಕೀಯ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ, ಯಲ್ಲಾಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 
   ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಯಲ್ಲಾಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ನೇತ್ರೇಕರ ಹಾಗೂ ಇನ್ನಿತರರು, ರಾಜ್ಯಾದ್ಯಾಂತ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯ ತೀವ್ರ ವಿರೋಧ ವ್ಯಕ್ತಪಡಿಸುತ್ತಾ, "ಬಿಜೆಪಿ ತನ್ನ ನೈತಿಕತೆ ಕಳೆದುಕೊಂಡಿದೆ," ಎಂದು ಹೇಳಿದರು. "ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪೊಕ್ಸೊ ಪ್ರಕರಣವಿರುವುದನ್ನು ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ, ಆದರೆ ಕೇವಲ ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡುತ್ತಿದೆ," ಎಂದು ಅವರು ಹೇಳಿದರು. 
   ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕಮಲಮ್ಮ ಎಂಬುವರ ಹೆಸರಿನಲ್ಲಿ 50/50 ರ ಅನುಪಾತದಲ್ಲಿ 37 ಗುಂಟೆ ಜಾಗವನ್ನು ಕೇವಲ ಮೂರು ದಿನಗಳಲ್ಲಿ ಹೆಸರಿಗೆ ಮಾಡಲಾಗಿದೆ. ಇದೇ ಸಂದರ್ಭ, ಎಸ್.ಸಿ. ಮಹೇಶ್ ಹೆಸರಿನಲ್ಲಿ 19 ನಿವೇಶನಗಳನ್ನು ನೀಡಲಾಗಿವೆ. ಮುಖ್ಯಮಂತ್ರಿಯವರ ಧರ್ಮಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ನೀಡಿದ ನಿವೇಶನವು ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲೇ ನೀಡಲ್ಪಟ್ಟಿದೆ ಎಂದಿದ್ದಾರೆ.  
    ಪ್ರಸ್ತುತ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬಜೆಟ್‌ನಲ್ಲಿ ತೀವ್ರ ಅನ್ಯಾಯ ಎಸಗಿದ್ದು, ಇದರಿಂದ ಜನತೆಯ ಆಕ್ರೋಶವನ್ನು ತಡೆಯಲು, ಜನರ ಗಮನವನ್ನು ಬದಲಿಸಲು ಬಿಜೆಪಿ ಹಾಸ್ಯಾಸ್ಪದ ಪಾದಯಾತ್ರೆ ಹಮ್ಮಿಕೊಂಡಿದೆ. "ಬಿಜೆಪಿಯ ಈ ಪಾದಯಾತ್ರೆಯು ಅವರ ರಾಜಕೀಯ ದಿವಾಳಿ ಮತ್ತು ನೈತಿಕ ವೈಫಲ್ಯವನ್ನು ಸ್ಪಷ್ಟಪಡಿಸುತ್ತದೆ. ರಾಜ್ಯದ ಜನರು ಇಂತಹ ರಾಜಕೀಯ ನಾಟಕಗಳನ್ನು ಗಮನಿಸುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಹೇಳಿದ್ದಾರೆ.
   ಈ ಪತ್ರಿಕಾ ಪ್ರಕಟಣೆ, ಕಾಂಗ್ರೆಸ್ ಪಕ್ಷದ ನಾಯಕತ್ವದ ಸೂಚನೆಯಂತೆ, ಮಹಿಳಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸರಸ್ವತಿ ಗುನಗಾ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುನಂದ ದಾಸ್, ಜಿಲ್ಲಾ ಕಾರ್ಯದರ್ಶಿ ಮತ್ತು ಪಟ್ಟಣ ಪಂಚಾಯತ್ ಸದಸ್ಯೆ ನರ್ಮದಾ ನಾಯ್ಕ, ಮತ್ತು ಪ.ಪಂ. ಸದಸ್ಯೆ ಹಲಿಮಾ ಕಕ್ಕೆರಿ ಕೂಡ ದನಿಗೂಡಿಸಿದ್ದಾರೆ.