ಯಲ್ಲಾಪುರ : ಭಾರತದ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಚಳುವಳಿ 'ಕ್ವಿಟ್ ಇಂಡಿಯಾ' ಇಂದು ಮತ್ತೆ ಜಾರಿಗೆ ತರುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಮು ನಾಯ್ಕ ಹೇಳಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಬಾಂಗ್ಲಾದಲ್ಲಿ ನಡೆಯುತ್ತಿರುವ ರಾಜಕೀಯ ಅಶಾಂತಿ ಮತ್ತು ಅಲ್ಲಿನ ಹಿಂದುಗಳ ವಿರುದ್ಧದ ಹಿಂಸಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಬಲಾತ್ಕಾರ, ಮನೆ-ಮಠ-ಮಂದಿರಗಳ ಧ್ವಂಸವನ್ನು ತಡೆಯಲು ಭಾರತ ಮಧ್ಯಸ್ಥಿಕೆ ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಸಲ್ಮಾನ ಖುರ್ಷಿದ ಜಾತ್ಯಾತೀತ ಭಾರತದ ಎಲ್ಲ ಅಧಿಕಾರ ಅನುಭವಿಸಿದವರು, ಖುರ್ಷಿದ ಅವರ ವಿವಾದಾತ್ಮಕ ಹೇಳಿಕೆ ಮತ್ತು ನಿರ್ಲಕ್ಷ್ಯ ಖಂಡನಾರ್ಹವಾಗಿದೆ ಎಂದು ನಾಯ್ಕ ಹೇಳಿದ್ದಾರೆ. ಹಿಂದುಗಳು ಮತ್ತು ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿರುವ ಭಾರತದಲ್ಲಿ, ಭ್ರಷ್ಟ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಮು ವೈಷಮ್ಯವನ್ನು ಉತ್ತೇಜಿಸುತ್ತಿದ್ದಾರೆ ಎಂದು ರಾನು ನಾಯ್ಕ ಆರೋಪ ಮಾಡಿದ್ದಾರೆ.