ಯಲ್ಲಾಪುರ: ಕರ್ನಾಟಕ ವಿಶ್ವವಿದ್ಯಾಲಯದ 2022- 23ನೇ ಸಾಲಿನ ಬಿ.ಇಡಿ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಟ್ಟಣದ ವಿಶ್ವದರ್ಶನ ಬಿ.ಇಡಿ ಕಾಲೇಜು ಉತ್ತಮ ಫಲಿತಾಂಶ ಸಾಧಿಸಿದೆ.
ಸುಹಾನಾ ಸೈಯದ್ ಶೇ. 93.66 ಅಂಕದೊಂದಿಗೆ ಪ್ರಥಮ, ಸುಶ್ಮಿತಾ ಮಾರುತಿ ನಾಯಕ್ ಶೇ. 93.33 ಅಂಕದೊಂದಿಗೆ ದ್ವಿತೀಯ, ಯಶೋಧಾ ಬಾಗೂರ ಮತ್ತು ಹೇಮಾ ಗೌಡ ಶೇ. 92.83 ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿರುತ್ತಾರೆ.