Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Sunday, 4 August 2024

ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅಧಿಕಾರಿಗಳಿಗೆ ಬೀಳ್ಕೊಡುಗೆ / ಕಿರವತ್ತಿ ವಲಯದಲ್ಲಿ ವನಮಹೋತ್ಸವ: ಪರಿಸರ ಸಂರಕ್ಷಣೆಗೆ ಒತ್ತು

ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅಧಿಕಾರಿಗಳಿಗೆ ಬೀಳ್ಕೊಡುಗೆ
ಯಲ್ಲಾಪುರ: ಯಲ್ಲಾಪುರ ಅರಣ್ಯ ವಿಭಾಗವು ಇತ್ತೀಚೆಗೆ ತನ್ನ  ವರ್ಗಾವಣೆಯಾದ ಮತ್ತು ನಿವೃತ್ತರಾದ ಅಧಿಕಾರಿಗಳಿಗೆ ಭವ್ಯವಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿತು. ಈ ಸಮಾರಂಭವು ಅರಣ್ಯ ಸಭಾಭವನದಲ್ಲಿ ನಡೆಯಿತು. 
  ಸಮಾರಂಭದ ಅಧ್ಯಕ್ಷತೆಯನ್ನು ಯಲ್ಲಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಜಿ ಪಿ ವಹಿಸಿದ್ದರು.
   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಎಚ್ ಎ ಅವರು ಯಲ್ಲಾಪುರ ಉಪವಿಭಾಗದಲ್ಲಿ ಸೇವೆ ಸಲ್ಲಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿ ಕೋಲಾರ ಸಾಮಾಜಿಕ ಅರಣ್ಯ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. 
    ವಲಯ ಅರಣ್ಯ ಅಧಿಕಾರಿ ಎನ್ ಎಲ್ ನದಾಫ್ ಅವರು ಯಲ್ಲಾಪುರ ವಿಭಾಗದ ಕಿರವತ್ತಿ ಅರಣ್ಯ ವಲಯ ಹಾಗೂ ಸರ್ವೆ ವಿಭಾಗದಲ್ಲಿ ಸೇವೆ ಸಲ್ಲಿಸಿ ಹಳಿಯಾಳ ವಿಭಾಗದ ದಾಂಡೇಲಿ ಪ್ರಾದೇಶಿಕ ವಲಯಕ್ಕೆ ವರ್ಗಾವಣೆಯಾಗಿದ್ದಾರೆ. 39 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವಲಯ ಅರಣ್ಯ ಅಧಿಕಾರಿ ಎಲ್ ಎ ಮಠ ಅವರು ನಿವೃತ್ತಿಯಾಗಿದ್ದಾರೆ.
   ಈ ಮೂವರು ಅಧಿಕಾರಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅವರ ಕಾರ್ಯದಕ್ಷತೆ, ಸ್ನೇಹಶೀಲತೆ ಮತ್ತು ಸಿಬ್ಬಂದಿಯೊಂದಿಗಿನ ಸಹಕಾರವನ್ನು ಸಹಕಾರಿಗಳು ಹಾಗೂ ಅಧಿಕಾರಿಗಳು ಮೆಚ್ಚುಗೆಯಿಂದ ನೆನೆದರು.
    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಅವರು ಸರ್ವರಿಗೂ ಶುಭ ಹಾರೈಸಿದರು. ಆನಂದ್ ಎಚ್ ಎ ಅವರು ತಮ್ಮ ಸೇವಾ ಅವಧಿಯಲ್ಲಿ ಎದುರಿಸಿದ ಸವಾಲುಗಳು ಮತ್ತು ತಂಡವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ಮಾತನಾಡಿದರು. 
   ಎನ್ ಎಲ್ ನದಾಫ್ ಅವರು ಯಲ್ಲಾಪುರದ ಅರಣ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಮತ್ತು ಮುಂಚೂಣಿ ಸಿಬ್ಬಂದಿಗಳ ಸಹಕಾರವನ್ನು ನೆನೆದರು.
    ನಿವೃತ್ತ ವಲಯ ಅರಣ್ಯ ಅಧಿಕಾರಿ ಎಲ್ ಎ ಮಠ ಅವರು ತಮ್ಮ ಸುದೀರ್ಘ ಸೇವೆಯಲ್ಲಿ ಸಹಕರಿಸಿದ ಸರ್ವರನ್ನು ಅಭಿನಂದಿಸಿದರು.
    ಸಮಾರಂಭದ ಅಧ್ಯಕ್ಷತೆವಹಿಸಿದ್ದ ಹರ್ಷಬಾನು ಜಿ ಪಿ ಅವರು ಪದೋನ್ನತಿ ಹೊಂದಿದ, ವರ್ಗಾವಣೆಯಾದ ಮತ್ತು ನಿವೃತ್ತರಾದ ಅಧಿಕಾರಿಗಳಿಗೆ ಶುಭ ಹಾರೈಸಿದರು.
   ಕಾತುರ ವಲಯ ಅರಣ್ಯ ಅಧಿಕಾರಿ ಎಂ ಹೆಚ್ ನಾಯಕ್ ಸ್ವಾಗತಿಸಿದರು ಮತ್ತು ಮುಂಡಗೋಡ ವಲಯ ಅರಣ್ಯ ಅಧಿಕಾರಿ ವಾಗೀಶ ಬಿ ಜೆ ವಂದಿಸಿದರು.

ಕಿರವತ್ತಿ ವಲಯದಲ್ಲಿ ವನಮಹೋತ್ಸವ: ಪರಿಸರ ಸಂರಕ್ಷಣೆಗೆ ಒತ್ತು
ಯಲ್ಲಾಪುರ: ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಕಿರವತ್ತಿ ಸರಕಾರಿ ಪ್ರೌಢಶಾಲೆಯಲ್ಲಿ ಕಿರವತ್ತಿ ವಲಯದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ನಂತರ ಮಾತನಾಡಿದ ಶಾಂತಾರಾಮ ಸಿದ್ದಿ, ಪರಿಸರ ಸಂರಕ್ಷಣೆ, ಗಿಡಮರಗಳ ಸಂರಕ್ಷಣೆ ಹಾಗೂ ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. 
 ಯಲ್ಲಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ ಭೂಮಿಯ ಮಹತ್ವ ಹಾಗೂ ಅರಣ್ಯ ಸಂರಕ್ಷಣೆಯ ಅಗತ್ಯತೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
   ಕಾರ್ಯಕ್ರಮದಲ್ಲಿ ಕಿರವತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗೀತಾ ಕೊಕ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಆರ್ ಹೆಗಡೆ, ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್, ಧನಗರ ಗೌಳಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ದೊಂಡು ಪಾಟೀಲ್, ಸರಕಾರಿ ಪ್ರೌಢ ಶಾಲೆ ಕಿರವತ್ತಿಯ ಮುಖ್ಯೋಪಾಧ್ಯಾಯ ಜನಾರ್ದನ ಗಾಂವಕರ್, ಕಿರವತ್ತಿ ವಲಯ ಅರಣ್ಯಾಧಿಕಾರಿ ಡಿ.ಎಲ್ ಮಿರ್ಜಾನಕರ್, ವನವಾಸಿ ಕಲ್ಯಾಣದ ಜಿಲ್ಲಾ ಕಾರ್ಯದರ್ಶಿ ಬೈರು ಜೋರೆ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.