ಯಲ್ಲಾಪುರ : ತಾಲೂಕಿನ ತೆಲಂಗಾರದಲ್ಲಿ ಭಾರತದ ಕ್ರಾಂತಿಕಾರಿ ಭಗತ ಸಿಂಗ್ ಅವರ ಪುತ್ಥಳಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಆಗಸ್ಟ್ 13 ರಂದು ಮಾಲಾರ್ಪಣೆ ಮಾಡಿದರು. ಈ ಕಾರ್ಯಕ್ರಮವು "ಹರ ಘರ್ ತಿರಂಗಾ" ಅಭಿಯಾನದ ಅಂಗವಾಗಿ ಆಯೋಜಿಸಲಾಯಿತು.
ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಭಗತ ಸಿಂಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪುತ್ಥಳಿ ಆವರಣವನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಜಿಲ್ಲಾ ಪಧಾಧಿಕಾರಿಗಳಾದ ಉಮೇಶ ಭಾಗ್ವತ, ಜಿ ಎನ್ ಗಾಂವ್ಕರ, ವೆಂಕಟ್ರಮ ಬೆಳ್ಳಿ, ಮತ್ತು ಮಂಡಳ ಉಪಾಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಇಡಗುಂದಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಿ ಆರ್ ಭಾಗ್ವತ, ಮತ್ತು ಪಕ್ಷದ ಪಧಾಧಿಕಾರಿಗಳಾದ ದತ್ತ ಭಟ್ಟ, ದೀಪಕ ಭಟ್ಟ ಬಾರೆ, ನವೀನ ಕಿರಗಾರೆ, ಟಿ ಎನ್ ಭಟ್ಟ, ವಿ ಎನ್ ಭಟ್ಟ, ಮಹೇಶ ಗಾಂವ್ಕರ, ರಾಮ ಕೋಮಾರ, ರವಿ ಬಿಡಾರ, ತಿಮ್ಮಣ ಗಾಂವ್ಕರ, ರತ್ನಾ ಬಾಂದೇಕರ, ಅನ್ನಪೂರ್ಣ ಭಟ್, ವೆಂಕಟರಮಣ ಗಾಮದ, ಸುರೇಶ್ ಮರಾಠಿ, ಮತ್ತು ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.