ಯಲ್ಲಾಪುರ : ಭಾರತದ ಸಂಸ್ಕೃತಿಯ ಶಕ್ತಿ ಪುರಾಣಗಳು ಮತ್ತು ಭಾಗವತಗಳಲ್ಲಿ ವಿಶಿಷ್ಟವಾಗಿ ತೋರುವಂತೆ ಇದೆ, ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಆಗಸ್ಟ್ 6 ರಂದು ಇಡಗುಂದಿ ಗ್ರಾಮಪಂಚಾಯತಿ ವ್ಯಾಪ್ತಿಯ ಮಣ್ಮನೆಯ ವಿಶ್ವನಾಥ ಭಟ್ಟರ ಮನೆಯಂಗಳದಲ್ಲಿ ನಡೆದ 'ರಸಮಂಜರಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
"ನಮ್ಮ ಋಷಿಮುನಿಗಳು ಹೇಗೆ ಬದುಕಬೇಕೆಂದು ತೋರಿಸಿದ್ದಾರೆ. ಪ್ರಾಣಿ, ಪಕ್ಷಿ, ಹುಳ ಬದುಕುತ್ತವೆ, ಆದರೆ ಮನುಷ್ಯ ಮಾತ್ರ ಬಾಳುತ್ತಾನೆ. ನಮ್ಮ ಪರಂಪರೆಯ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆ ನಮ್ಮ ಮೇಲಿದೆ," ಎಂದು ಅವರು ಹೇಳಿದರು.
"ಈ ಕಾರ್ಯಕ್ರಮವು ಕುಟುಂಬ ಮತ್ತು ಸಾರ್ವಜನಿಕರಿಗೆ ಒಳ್ಳೆಯ ಸಮಾನ್ವಯವನ್ನು ತೋರಿಸಿದೆ. ಆತಿಥ್ಯ ಮತ್ತು ಗೌರವದಿಂದ ಸಮಾಜಕ್ಕೆ ಮಾದರಿಯಾಗಿದೆ," ಎಂದು ಅವರು ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಾಧ್ಯಮ ವಿಭಾಗದ ಮುಖ್ಯಸ್ಥ ಶಂಕರ ಭಟ್ಟ, "ಈ ಸಂದರ್ಭದಲ್ಲಿ ಯುವಜನತೆ ಸಂಸ್ಕೃತಿ ಮತ್ತು ಪರಂಪರೆಯಿಂದ ದೂರವಾಗುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಸಂಸ್ಕಾರ ಮತ್ತು ಒಗ್ಗಟ್ಟಿನ ಮಹತ್ವವನ್ನು ನೆನಪಿಸುತ್ತವೆ," ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಾವಿದರಾದ ರಾಜೇಂದ್ರ ಹೆಗಡೆ, ಉಮಾ ರಾಜೇಂದ್ರ ಹೆಗಡೆ, ದೀಪಾ ರಾಘವೇಂದ್ರ ಉಪಸ್ಥಿತರಿದ್ದರು. ಸುಕನ್ಯಾ ವಿ. ಭಟ್ಟ ಪ್ರಾಸ್ತಾವಿಕ ಮಾತನಾಡಿದರು, ಮುಕ್ತಾ ಶಂಕರ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.
ರಸಮಂಜರಿ
ಯಲ್ಲಾಪುರ : ತಾಲೂಕಿನ ಮಣ್ಮನೆಯ ಸುಕನ್ಯಾ ಮತ್ತು ವಿಶ್ವನಾಥ ಭಟ್ಟ ಇವರ ಮನೆಯಂಗಳದಲ್ಲಿ ಅ.6 ರಂದು ನಡೆದ 'ರಸಮಂಜರಿ' ಅತ್ಯಂತ ಯಶಸ್ವಿಯಾಗಿ ನಡೆಯಿತು.