ಯಲ್ಲಾಪುರ: ಯಲ್ಲಾಪುರ ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ ಆಗಸ್ಟ್ 13ರಂದು ಚಿಣ್ಣರ ಛದ್ಮವೇಷ ಸ್ಪರ್ಧೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ಕಿಂಡರ್ ಗಾರ್ಡನ್, ಎಲ್‌ಕೆಜಿ ಮತ್ತು ಯುಕೆಜಿ ಈ ಮೂರು ವಿಭಾಗಗಳಲ್ಲಿ ಮಕ್ಕಳಿಗೆ ವಿಭಿನ್ನ ಛದ್ಮವೇಷ ತೊಟ್ಟು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಯಿತು.
ಕಿಂಡರ್ ಗಾರ್ಡನ್ ವಿಭಾಗದಲ್ಲಿ ರೋಷಲ್, ಆನಿಯಾ, ಬೆನ್ ಯೆಡನ್ , . ಎಲ್‌ಕೆಜಿ ವಿಭಾಗದಲ್ಲಿ ಹೊಸಾನ್ನಾ, ಅರೀಸಾ, ಆನ್ಯಾ, ಆಕರ್ಷ, ಅಯಾನ್, ಆರ್ನವ್, ರಿವಾನ್, ಮತ್ತು ಅದ್ವಿಕ್ ಗೆ ಪ್ರಶಸ್ತಿಗಳು ದೊರಕಿದವು. ಯುಕೆಜಿ ವಿಭಾಗದಲ್ಲಿ ಸುಜೆನ್, ಶ್ರೇಯಸ್, ಪಿಯಾನ, ಜಿಸಸಲಿ, ಕ್ರಿಸ್ಟಿ ಅಲ್ಫ್ಯಾನ್ಸೋ, ಪ್ರೀತಿ, ಮತ್ತು ಪ್ರತೀಕ್ ಅವರು ವಿಜೇತರಾಗಿ ಹೊರಹೊಮ್ಮಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಂದನೇ ಫಾದರ್ ಪೀಟರ್ ಕರ್ನೇರಿಯೋ ವಹಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ರೊಯ್ಯಸ್ಟನ್ ಗೊನ್ಸಾಲ್ವೀಸ್, ಶಿಕ್ಷಕ ವೃಂದ, ಮತ್ತು ಸ್ಪರ್ಧಿಗಳ ಪಾಲಕರು ಈ ವೇಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಅನಿತಾ ಮತ್ತು ಕುಸುಮಾ ಕಾರ್ಯ ನಿರ್ವಹಿಸಿದರು. ಮಕ್ಕಳು ಉತ್ಸಾಹಭರಿತರಾಗಿ ತಮ್ಮ ತಮ್ಮ ಛದ್ಮವೇಷಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳ ಪ್ರತಿಭೆಯನ್ನು ಮೆಚ್ಚಿಕೊಂಡು, ಅವರ ಭವಿಷ್ಯದ ಬೆಳೆವಣಿಗೆಗೆ ಶುಭ ಹಾರೈಸಿದರು. ಮಕ್ಕಳ ಪಾಲಕರು ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಶ್ವೇತಾ ಸ್ವಾಗತಿಸಿ, ನಿರೂಪಣೆ ನಡೆಸಿದರು.