ಯಲ್ಲಾಪುರ: ವಿಶ್ವದರ್ಶನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ನಂತರ ಕೃಷಿಯಲ್ಲಿ ತೊಡಗಿಸಿಕೊಂಡು ಅನನ್ಯ ಅನುಭವ ಪಡೆದರು. ಕಲಗದ್ದೆ ಗ್ರಾಮದ ಉಪನ್ಯಾಸಕ ಸಚಿನ್ ಭಟ್ ಅವರ ಗದ್ದೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಗದ್ದೆ ನಾಟಿ ಮಾಡಿದರು.
ಪ್ರಾಚಾರ್ಯ ಡಾ. ದತ್ತಾತ್ರಯ ಗಾಂವಕರ ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವವನ್ನು ವಿವರಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯ ಅಭಿವೃದ್ಧಿಯತ್ತ ಆಸಕ್ತಿ ಬೆಳೆಸಲು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಗನ್ನಾಥ ಬಾಸುತ್ಕರ, ರವೀಂದ್ರ ಶರ್ಮ, ರಮೇಶ ನಾಯಕ ಮತ್ತು ಉಪಪ್ರಾಂಶುಪಾಲ ನಾಗರಾಜ ಹೆಗಡೆ ಪಾಲ್ಗೊಂಡರು. ಕೆಸರುಗದ್ದೆಯಲ್ಲಿ ಖುಷಿಯಿಂದ ನಡೆದ ನಾಟಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೃಷಿಯ ಕುರಿತು ಅರಿತುಕೊಂಡರು.
ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಪ್ರೀತಿ ಹುಟ್ಟಿಸುವ ಪ್ರಯತ್ನ ಮಾಡಿದರು. ಕಚೇರಿ ಸಿಬ್ಬಂದಿ ಮತ್ತು ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಿರವತ್ತಿ ಮತ್ತು ಮದ್ನೂರ್ ಕ್ಲಸ್ಟರ್ ಶಾಲೆಗಳಿಗೆ ಪಿಎಂಶ್ರೀ ಸಮಾಲೋಚನೆ
ಯಲ್ಲಾಪುರ : ತಾಲೂಕಿನ ಮಾದೇವಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿರವತ್ತಿ ಮತ್ತು ಮದ್ನೂರ್ ಕ್ಲಸ್ಟರ್ ಶಾಲೆಗಳ ಸಮಾಲೋಚನ ಸಭೆ ಶನಿವಾರ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್. ಹೆಗಡೆಯವರು ಸಭೆಯನ್ನು ಉದ್ಘಾಟಿಸಿ, ಪಿಎಂಶ್ರೀ ಯೋಜನೆ ಮತ್ತು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು..
ಪ್ರಶಾಂತ್ ಪಟಗಾರ ಭಾರತದಲ್ಲಿ ಪ್ರಧಾನ ಮಂತ್ರಿ ಶಾಲೆ (ಪಿಎಂಶ್ರೀ) ಯೋಜನೆ, ಕಲಿಕಾ ಫಲಗಳು ಮತ್ತು ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ನಿರ್ವಹಣೆಗಳ ಬಗ್ಗೆ ವಿವರಣಾತ್ಮಕವಾಗಿ ಮಾಹಿತಿ ನೀಡಿದರು. ಪ್ರಶಾಂತ್ ಜಿ ಎನ್ ಶಾಲೆಗಳಲ್ಲಿ ಪಠ್ಯ ಪುಸ್ತಕ ಮತ್ತು ದಾಖಲೆಗಳ ನಿರ್ವಹಣೆಯ ಬಗ್ಗೆ ಸೂಚನೆಗಳನ್ನು ನೀಡಿದರು. ಸಿಆರ್‌ಪಿಗಳು ವಿಶ್ವನಾಥ ಮರಾಠೆ ಮತ್ತು ನಾಗರಾಜ್ ಡಿ ನಾಯ್ಕ ಇವರ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಶಿಕ್ಷಕರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.