ಯಲ್ಲಾಪುರ : ಪ್ರತಿ ವರ್ಷದ ಶ್ರಾವಣ ಮಾಸದಂತೆ ಈ ವರ್ಷದ ಶ್ರಾವಣ ಮಾಸದಲ್ಲಿ ತಾಲೂಕಿನ ಕಿರವತ್ತಿ ಅರಣ್ಯ ಇಲಾಖೆ ಸಮೀಪ ಇರುವ ಶ್ರೀ ಮಾರುತಿ ದೇವಸ್ಥಾನದಲ್ಲಿ ಆಗಸ್ಟ್ 17ರ ಶನಿವಾರ ಜೈ ಹನುಮಾನ್ ಸಮಿತಿಯಿಂದ ಹನುಮಾನ್ ಚಾಲೀಸಾ ಪಠಣ ಹಾಗೂ ರಕ್ಷಾ ಬಂಧನ ನಡೆಯಿತು.
ಶ್ರಾವಣ ಮಾಸದಲ್ಲಿ ಪ್ರತಿ ಶನಿವಾರದಂದು ಈ ಕಾರ್ಯಕ್ರಮ ನಡೆಯುತ್ತಿದ್ದು, ಆಗಸ್ಟ್ 17ರ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ರಕ್ಷಾಬಂಧನ ಕಾರ್ಯಕ್ರಮವಾಗಿಯೂ ನಡೆಯಿತು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಅಭ್ಭಿಯವರು, ರಕ್ಷಾಬಂಧನದ ಪ್ರಾಮುಖ್ಯತೆ ಧಾರ್ಮಿಕ ಆಚರಣೆಯ ಮಹತ್ವ ಹಾಗೂ ರಾಷ್ಟ್ರೀಯತೆಯ ಕುರಿತು ಉಪನ್ಯಾಸ ನೀಡುತ್ತಾ, ಬಂಧುತ್ವ, ರಕ್ಷಣೆ ಮತ್ತು ಪ್ರೀತಿಯ ಸಂಕೇತವಾದ ರಕ್ಷಾಬಂಧನವು ಧಾರ್ಮಿಕ ಆಚರಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
ರಾಷ್ಟ್ರೀಯತೆ ಎಂದರೆ ಕೇವಲ ಪದವಲ್ಲ, ಆದು ಹೃದಯದಲ್ಲಿನ ಪ್ರೀತಿ ಮತ್ತು ದೇಶಕ್ಕಾಗಿ ಸ್ವಯಂಸೇವೆಯ ಮನೋಭಾವ, ನಾವು ರಕ್ಷಾಬಂಧನದ ಆಚರಣೆಯ ಮೂಲಕ ಬಂಧುತ್ವವನ್ನು ಬಲಪಡಿಸುವುದಲ್ಲದೆ, ದೇಶಕ್ಕಾಗಿ ಸದಾ ಸ್ವಯಂಸೇವೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಜೈ ಹನುಮಾನ ಸಮಿತಿಯ ಪ್ರಮುಖರಾದ ಅರುಣ ನಾಯ್ಕ, ರಾಖೇಶ ಖಾನಾಪುರ, ಪ್ರಭು ಚಿಂಚಕಂಡಿ, ಆರ್‌ಎಸ್‌ಎಸ್ ಪ್ರಮುಖ ಭರತ ಕೊಕ್ರೆ, ಪರಶುರಾಮ ಇಂಗಳೆ ಸೇರಿದಂತೆ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.