ಯಲ್ಲಾಪುರ: ವಡೆಹುಕ್ಕಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 'ಮಾತೆಗೊಂದು ಮರ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳು ತಮ್ಮ ತಾಯಂದಿರಿಗೆ ಸಸಿಗಳನ್ನು ನೀಡುವ ಮೂಲಕ ವನಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದರು.
ಶಾಲಾ ಆವರಣದಲ್ಲಿ ನೆಟ್ಟ ಸಸಿಗಳನ್ನು ಮುಂದೆ ಮರವಾಗುವವರೆಗೆ ಪೋಷಿಸುವ ಜವಾಬ್ದಾರಿಯನ್ನು ತಾಯಂದಿರಿಗೆ ವಹಿಸಲಾಯಿತು. ಡಿಆರ್‌ಎಫ್‌ಒ ಸಂತೋಷ್, ಶಿಕ್ಷಕರಾದ ತನುಜಾ ದೇಸಾಯಿ, ಮಾರುತಿ ಎಂ ನಾಯ್ಕ ಪ್ರಕೃತಿ ಹಾಗೂ ಮರಗಳ ಮಹತ್ವ ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರವಿ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯಲ್ಲಾಪುರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೆಣಗಾಡಿದ ಮಹನೀಯರನ್ನು ಸ್ಮರಿಸಿದರು.
ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸುವ ಸಾಮರ್ಥ್ಯ ಯುವಕರಲ್ಲಿ ಬೆಳೆಯಬೇಕು ಎಂದು ಕರೆ ನೀಡಿದರು. ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆಯಲು ದಶಕಗಳೇ ಬೇಕಾಯಿತು. ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ನಿವೃತ್ತ ಶಿಕ್ಷಕರಾದ ಎಸ್.ಎಲ್.ಜಾಲಿಸತ್ಗಿ, ಮಧು ಭಟ್ಟ, ಎಂ.ಆರ್.ಕುಂಬ್ರಿಗುಡ್ಡೆ, ವಿನಾಯಕ ಹೆಗಡೆ ಸೇರಿದಂತೆ ಅನೇಕ ಗಣ್ಯರು ಮತ್ತು ವಿದ್ಯುತ್ ಗುತ್ತಿಗೆದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯಲ್ಲಾಪುರ: ಸ.ಹಿ.ಪ್ರಾ ಶಾಲೆ ಅರಬೈಲ್ ನಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರೂಪಾ ಬಾಂದಿಯವರು ಧ್ವಜಾರೋಹಣ ನೆರವೇರಿಸಿ ಶುಭ ಕೋರಿದರು.
ಶಾಲೆಯ ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನಗಳನ್ನು ಸ್ಮರಿಸಿ, ದೇಶದ ಏಕತೆ ಮತ್ತು ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಮುಖ್ಯ ಎಂದು ಬಲಿಷ್ಠ ಭಾರತ ನಿರ್ಮಾಣದ ಕರೆ ನೀಡಿದರು.
ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿವಿಧ ಭಾಷೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಗುರುರಾಜ ಆಚಾರಿ,ಸದಸ್ಯರಾದ ವಿಘ್ನೇಶ್ವರ ಭಟ್,ನಾಗರತ್ನಾ ಸಿದ್ದಿ,ಶಾಂತಲಾ ದೇವಾಡಿಗ,ಮಂಗಲಾ ಸಿದ್ದಿ,ರಾಮಚಂದ್ರ ಭಟ್,ಗಣಪತಿ ಹೆಗಡೆ,ಗೌರಿ ಮಡಿವಾಳ,ಸ್ವಾತಿ ರಂಗೈಶೇಣ್ವಿ,ಮುರುಗೇಶ ಶೆಟ್ಟಿ,ವಿದ್ಯಾ ಭಟ್,ಭಾರತಿ ಮರಾಠಿ,ಮಹೇಶ ಸಿದ್ದಿ,ಶಾಲಿನಿ ಗೌಡ,ಗೀತಾ ಸಿದ್ದಿ, ನಯನಾ ಭಟ್,ಮಂಜುನಾಥ ಭಟ್, ಹಾಗೂ ಗ್ರಾ.ಪಂ ಸದಸ್ಯರಾದ ವಿಶ್ವೇಶ್ವರ ಹೆಗಡೆ,ಆಶಾ ನಾಯರ್, ನೂತನ ನಾಯ್ಕ ಆರೋಗ್ಯ ಕಾರ್ಯಕರ್ತೆ, ಮಧು ನಾಯ್ಕ ಆಶಾ ಕಾರ್ಯಕರ್ತೆ, ತ್ರೇಷಾ ನೋಹಾ ಅಂಗನವಾಡಿ ಕಾರ್ಯಕರ್ತೆ ಹಾಗೂ ಶಂಕರ ನಾಯಕ,ಜೈರಾಮ ನಾಯಕ,ರಾಮಕೃಷ್ಣ ಹೆಗಡೆ,ದಾಮೋದರ ಭಟ್ಟ್,ಕಿಶೋರ ನಾಯ್ಕ,ಕಿರಣ ರಾಣೆ,ಅನಂತ ಸಿದ್ದಿ,ನಾಗರಾಜ ನಾಯ್ಕ, ನಾಗರಾಜ ಹೆಗಡೆ,ಶಾಂತಿ ನೋಹಾ,(ದಿವಂಗತ ಕೆ.ಆರ್ ನಾಯ್ಕ) ನವೀನ ನಾಯ್ಕ,ಗಣಪತಿ ಗೌಡ,ಅರವಿಂದ ಹೆಬ್ಬಾರ್, ದಿನೇಶ ನಾಯ್ಕ, ದಾಮೋದರ ಶೆಟ್ಟಿ,ಸಹಶಿಕ್ಷಕರಾದ ರಾಮ ಗೌಡ, ಶಾಲೆಯ ಶಿಕ್ಷಕರಾದ ನಾಗರಾಜ ಆಚಾರಿ, ಮಹೇಶ ಭಟ್ ಇದ್ದರು. ಉಪಸ್ಥಿತರಿದ್ದರು.
ಕಿರವತ್ತಿ ಐಕ್ಯತಾ ಸಂಘಟನೆಯಿಂದ ಧ್ವಜಾರೋಹಣ
ಯಲ್ಲಾಪುರ: ತಾಲೂಕಿನ ಕಿರವತ್ತಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಐಕ್ಯತಾ ಸಂಘಟನೆ ಸಂಭ್ರಮದಿಂದ ಆಚರಿಸಿತು. ಸಂಘಟನೆಯ ಪ್ರಮುಖರಾದ ಮಹೇಶ್ ಪೂಜಾರ್ ಅವರು ಧ್ವಜಾರೋಹಣ ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಹೇಶ ದಿಂಡವಾಡ್, ಬಸವರಾಜ ಹರಿಜನ್, ದತ್ತು ಹೇಂದ್ರೆ, ರಬ್ಬಾನಿ ಪಟೇಲ್, ಹರೂನ್ ಶೇಖ್, ಅಂತೋನ್ ಕೊಂಗನವರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಯಲ್ಲಾಪುರ : ಕಂಪ್ಲಿ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಧ್ಯಕ್ಷೆ ರೇಣುಕಾ ಭೋವಿವಡ್ಡರ 78ನೇ ಸ್ವತಂತ್ರೋತ್ಸವದ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರು ಸಿಬ್ಬಂದಿಗಳು ಶಿಬಿರ ಶಾಲಾ ಕಾಲೇಜು ವಿದ್ಯಾರ್ಥಿಗಳು ಊರ ನಾಗರಿಕರು ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಯಲ್ಲಾಪುರ : ಮಂಚಿಕೇರಿ ಕೆನರಾ ಬ್ಯಾಂಕ್ ನಲ್ಲಿ ಪಂಚಾಯಿತಿ ಸದಸ್ಯ ಗಣೇಶ್ ರೋಕಡೆ 78ನೇ ಸ್ವತಂತ್ರೋತ್ಸವದ ಧ್ವಜಾರೋಹಣವನ್ನು ಮಾಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಯಲ್ಲಾಪುರ : ಯಡಳ್ಳಿ ಕುಂದೂರು ಶಾಲೆಯಲ್ಲಿ ಪಂಚಾಯಿತಿ ಸದಸ್ಯ ಹಾಗೂ ರಂಗಕರ್ಮಿ ಎಂ ಕೆ ಭಟ್ ಯಡಳ್ಳಿ ಧ್ವಜಾರೋಹಣ ಮಾಡಿದರು.