ಯಲ್ಲಾಪುರದಲ್ಲಿ ಮಳೆ ತಗ್ಗಿ, ಸೂರ್ಯನ ದರ್ಶನ: ಜನರಲ್ಲಿ ನೆಮ್ಮದಿಯ ನಿಟ್ಟುಸಿರು!
ಯಲ್ಲಾಪುರ: ಕಳೆದ ಒಂದು ತಿಂಗಳಿಂದ ಬಿಟ್ಟು ಬಿಡದೇ ಸುರಿದ ಭಾರೀ ಮಳೆ ತಣ್ಣಗಾಗಿದ್ದು, ಕಳೆದ ಮೂರು ನಾಲ್ಕು ದಿನಗಳಿಂದ ಸೂರ್ಯನ ದರ್ಶನವಾಗುತ್ತಿದೆ. ಆಗಾಗ ತುಂತುರು ಮಳೆ ಸುರಿಯುತ್ತಿದೆಯಾದರೂ ಜನರಿಗೆ ಯಾವುದೇ ಸಮಸ್ಯೆಯಾಗಿಲ್ಲ.
ಮಲೆನಾಡಿನಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನರು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಭೂಮಿಗೆ ಹಿನ್ನಡೆಯಾಗಿದ್ದು, ಅಡಿಕೆ ಬೆಳೆಗಳಿಗೆ ಕೊಳೆ ರೋಗ ಬಾಧಿಸಿದೆ.
ಕೆರೆಕಟ್ಟೆಗಳು ಮತ್ತು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ತಮ್ಮ ಮನೆಗಳನ್ನು ತಲುಪಲು ಕಷ್ಟಪಡುತ್ತಿದ್ದಾರೆ. ವಿದ್ಯುತ್ ವ್ಯತ್ಯಯ ಮತ್ತು ದೂರಸಂಪರ್ಕ ಸ್ಥಗಿತಗೊಂಡಿದ್ದು, ಜನರು ತಾತ್ಕಾಲಿಕವಾಗಿ ಸಂಪರ್ಕ ಮಾಡಲಾಗಿದೆ.
ಯಲ್ಲಾಪುರದಲ್ಲಿನ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಮುಂದಿನ ದಿನಗಳಲ್ಲಿ ಪರಿಹಾರವಾಗುವ ನಿರೀಕ್ಷೆಯಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ನಿಂತು, ಬಿಸಿಲು ಬಿದ್ದಿರುವುದರಿಂದ ಯಲ್ಲಾಪುರ ತಾಲೂಕಿನ ಜನರಿಗೆ ಹಲವು ನೆಮ್ಮದಿ ಉಂಟಾಗಿವೆ. ಮಳೆ ನಿಂತು ಬಿಸಿಲು ಬಿದ್ದಿರುವುದರಿಂದ ಬೆಳೆಗಳಿಗೆ ಹಾನಿ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಬೆಳೆಗಳು ಚೆನ್ನಾಗಿ ಬೆಳೆಯಲಿವೆ ಎನ್ನಲಾಗಿದೆ. ಮಳೆ ನಿಂತಿರುವುದರಿಂದ ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಸುಗಮವಾಗಿ ನಡೆಸುತ್ತಿದ್ದಾರೆ. ಚನ್ನಾಗಿ ಬಿಸಿಲು ಬಿದ್ದಿರುವುದರಿಂದ ಶಾಲಾ ವಿದ್ಯಾರ್ಥಿಗಳು ಸುಲಭವಾಗಿ ಶಾಲೆಗೆ ಹೋಗಿ ಬರಬಹುದಾಗಿದೆ.
ಜನರು ತಮ್ಮ ದೈನಂದಿನ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಮಳೆಯಿಂದಾಗಿ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ.
ಒಟ್ಟಾರೆ, ಕಳೆದ ಒಂದು ತಿಂಗಳಿಂದ ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆ ತಾಲೂಕಿನಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿತ್ತು. ಹಲವಾರು ಕಡೆಗಳಲ್ಲಿ ಗುಡ್ಡ ಕುಸಿತ, ಮಣ್ಣು ಕುಸಿತ ಸಂಭವಿಸಿದ್ದು, ರಸ್ತೆಗಳು ಕೊಚ್ಚಿ ಹೋಗಿ, ಮೇಲ್ಮೈಭಾಗ ಕಿತ್ತು ಹೊಂಡ ಗುಂಡಿಗಳು ಬಿದ್ದಿದ್ದವು. ಅತಿಯಾದ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಅಂಟಿಕೊಂಡಿತ್ತು. ಹುಣಶೆಟ್ಟಿಕೊಪ್ಪ ಭಾಗದಲ್ಲಿ ನಾಟಿಗಾಗಿ ಕಾದಿಟ್ಟ ಸಸಿಗಳು ವಿಪರೀತವಾದ ಮಳೆಯಿಂದಾಗಿ ಕೊಳೆತು ಹೋಗಿದ್ದವು.
ಮಳೆಯಿಂದಾಗಿ ಮುರಿದು ಬಿಳುತ್ತಿರುವ ಮರಗಳು ಮತ್ತು ಮರದ ಟೊಂಗೆಗಳು ಸಮರ್ಪಕ ವಿದ್ಯುತ್ ವ್ಯತ್ಯಯವನ್ನು ಉಂಟುಮಾಡಿದ್ದವು.
ವಿದ್ಯುತ್ ಕಂಬಗಳು ಮರಿದುಬೀಳುವುದು, ತಂತಿಗಳು ಹರಿದು ಬೀಳುವುದು ನಡೆದು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪ್ರತ್ಯೇಕ ಕಾರಣವಾಗಿತ್ತು.
ಮಳೆಯಿಂದಾಗಿ ಗ್ರಾಮೀಣ ಭಾಗದ ದೂರ ಸಂಪರ್ಕ ವ್ಯವಸ್ಥೆಯು ಕೂಡ ಹದಗೆಟ್ಟು ಹೋಗಿತ್ತು. ಹೀಗಾಗಿ, ಒಬ್ಬರನ್ನೊಬ್ಬರು ಸಂಪರ್ಕಿಸಲು ಹೆಣಕಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ತಿಂಗಳು ಗಟ್ಟಲೆ ಬಿಟ್ಟು ಬಿಡದೇ ಸುರಿದ ಭಾರೀ ಮಳೆ ಜನರಲ್ಲಿ ಆತಂಕ ಮೂಡಿಸಿದ್ದರೆ, ಕಳೆದ ಐದಾರು ದಿನಗಳಿಂದ ಕಾಣಿಸಿಕೊಂಡ ಸೂರ್ಯ ಆತಂಕವನ್ನು ದೂರ ಮಾಡಿ ಮಂದಹಾಸ ಮೂಡಿಸಿದ್ದಾನೆ. ಜನ ನಿರ್ಭೀತಿಯಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Bottom ;