ಯಲ್ಲಾಪುರ : ವಜ್ರಳ್ಳಿ ಪಂಚಾಯತಿ ವ್ಯಾಪ್ತಿಯ ಈರಾಪುರದಿಂದ ಬಾಸಲ್ ಸೇರುವ ರಸ್ತೆಯು ಮಳೆಗಾಲದ ಪರಿಣಾಮವಾಗಿ ಸಂಪೂರ್ಣ ಕುಸಿದು ಬಿದ್ದಿತ್ತು. ರಸ್ತೆಯ ಹಾನಿಯ ನಂತರ, ಸ್ವತಃ ತಮ್ಮ ಪ್ರಯತ್ನದಿಂದ ದುರಸ್ತಿ ಕಾರ್ಯಕ್ಕೆ ಮುಂದಾದರು.
ಆಗಸ್ಟ್ 13ರ ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ಥಳೀಯರು ಕುಸಿದುಬಿದ್ದ ರಸ್ತೆಯ ದುರಸ್ತಿ ಕಾರ್ಯಕ್ಕೆ ಕೈಹಾಕಿದರು. ಗ್ರಾಮ ಪಂಚಾಯತ್ ಸದಸ್ಯರಾದ ತಿಮ್ಮಣ್ ಗಾಂವ್ಕರ್ ಚಿಟ್ಟೆಪಾಲ್ ಅವರು ಈ ಕಾರ್ಯಕ್ಕೆ ಎರಡು ಪೈಪ್ಗಳನ್ನು ಒದಗಿಸಿದರು. ಸ್ಲೀಯರಾದ ತಿಮ್ಮಣ್ಣ ಭಾಗ್ವತ್, ಸೂರಣ್ಣ, ವಿಠೋಬ ನಾಯ್ಕ, ತಿಮ್ಮಣ್ಣ ಗಾಂವ್ಕರ್ ಸೋನ್ಮನಿ, ಸುಬ್ಬಣ್ಣ ಭಾಗ್ವತ್ಮನೆ ಸೇರಿದಂತೆ ಅನೇಕರು ತಮ್ಮ ಶ್ರಮದಾನದಿಂದ ಈ ಕಾರ್ಯದಲ್ಲಿ ಭಾಗಿಯಾಗಿದರು.
ಇವರ ತಂಡವೊಂದು, ದಿನಪೂರ್ತಿ ಶ್ರಮಿಸಿ, ಸಂಜೆಯ ಹೊತ್ತಿಗೆ ರಸ್ತೆಯನ್ನು ದುರಸ್ತಿ ಮಾಡಿ, ಸಂಚಾರಕ್ಕೆ ಬಳಸುವಂತೆ ಮಾಡಿದರು. ಈ ಕಾರ್ಯಕ್ಕೆ ಗ್ರಾಮಸ್ಥರು ಹೆಮ್ಮೆಯಿಂದ ಇತರರು ಸಹ ಖುಷಿಪಟ್ಟರು.
ಗ್ರಾಮಸ್ತರ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತ ವೆಂಕಟರಮಣ ಬೆಳ್ಳಿ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಒಟ್ಟಾಗಿ ಸಂಘಟಿತರಾಗಿ ಈ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ರೀತಿಯ ಕಾರ್ಯಗಳು ಮುಂದುವರಿಯಬೇಕು,” ಎಂದು ಬೆಳ್ಳಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ಕೆ ಅಭಿನಂದನೆಗಳು ವ್ಯಕ್ತವಾಗಿದ್ದು, ಗ್ರಾಮಸ್ಥರ ಸೇವಾ ಮನೋಭಾವಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.