ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ, ಯಲ್ಲಾಪುರ ತಾಲೂಕಿನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೈಕ್ ರ್ಯಾಲಿ ಮತ್ತು ತಿರಂಗಾ ಯಾತ್ರೆ ಆಯೋಜಿಸಲಾಗಿಸಲಾಗಿದೆ ಎಂದು ತಹಶೀಲ್ದಾರ ಅಶೋಕ ಭಟ್ಟ ತಿಳಿಸಿದ್ದಾರೆ.
ಬೈಕ್ ರ‌್ಯಾಲಿ: ಆಗಸ್ಟ್ 13 ರಂದು ಬೆಳಗ್ಗೆ 9:30 ಕ್ಕೆ ಆಡಳಿತ ಸೌಧದಿಂದ ಪ್ರಾರಂಭವಾಗುವ ಈ ರ‌್ಯಾಲಿ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮತ್ತು ಬೆಲ್ ರೋಡ್ ಮುಖಾಂತರ ಮತ್ತೆ ಆಡಳಿತ ಸೌಧದಲ್ಲಿ ಮುಕ್ತಾಯಗೊಳ್ಳಲಿದೆ.
ತಿರಂಗಾ ಯಾತ್ರೆ: ಆಗಸ್ಟ್ 14 ರಂದು ಬೆಳಗ್ಗೆ 9:30 ಕ್ಕೆ ಆಡಳಿತ ಸೌಧದಿಂದ ಪ್ರಾರಂಭವಾಗುವ ಈ ಯಾತ್ರೆ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬೆಲ್ ರೋಡ್ ಮತ್ತು ತರಕಾರಿ ಮಾರುಕಟ್ಟೆ ಮುಖಾಂತರ ಮತ್ತೆ ಆಡಳಿತ ಸೌಧದಲ್ಲಿ ಮುಕ್ತಾಯಗೊಳ್ಳಲಿದೆ.
ಸಮವಸ್ತ್ರ ಅಥವಾ ಶುಭ್ರ ಬಿಳಿ ಸಮವಸ್ತ್ರ ಧರಿಸುವುದು ಕಡ್ಡಾಯ. ಬೈಕ್ ಚಾಲಕರು ಹೆಲ್ಮೆಟ್ ಧರಿಸುವುದು ಕೂಡ ಅನಿವಾರ್ಯ. ಎಲ್ಲಾ ಸರಕಾರಿ ನೌಕರರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
ಈ ಕಾರ್ಯಕ್ರಮಗಳ ಮೂಲಕ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವುದು ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಳ್ಳುವುದು ಈ ಆಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಯಲ್ಲಾಪುರ ತಹಶೀಲ್ದಾರರು ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.