ಯಲ್ಲಾಪುರ: ಕಾರವಾರ ಜನ್ಮ ಭೂಮಿಯಾದರೂ ಯಲ್ಲಾಪುರ ತಾಲೂಕನ್ನೇ ಕರ್ಮ ಭೂಮಿಯಾಗಿಸಿಕೊಂಡು, ವೃತ್ತಿಯನ್ನೇ ವೃತವಾಗಿಸಿದ ಗೋಪಾಲ ಅಚ್ಚುತ ನಾಯ್ಕ ಅವರನ್ನು ಶಿವಪ್ರದಾ ಪ್ರಕಾಶನ ಮತ್ತು ಸೇವಾ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಸಮಯಕ್ಕೆ ಹಾಗೂ ತನ್ನ ಕರ್ತವ್ಯಕ್ಕೆ ಬಹಳ ಮಹತ್ವ ನೀಡಿ ನೀರಿನ ಪಂಪ ರಿಪೇರಿಯಲ್ಲಿ ಅತ್ಯಂತ ನೈಪುಣ್ಯತೆ ಗಳಿಸಿ 'ಪಂಪ ಸರ್ಜನ್' ಎಂದು ಕರೆಸಿಕೊಂಡು ಯಲ್ಲಾಪುರ ತಾಲೂಕಿಗೆ ಪ್ರಾಮಾಣಿಕ ಸೇವೆ ನೀಡಿ ಎಲ್ಲರ ಮೆಚ್ಚುಗೆ ಪಾತ್ರರಾದ ಗೋಪಾಲ ಅಚ್ಚುತ ನಾಯ್ಕ ಅವರನ್ನು ಶಿವಪ್ರದಾ ಪ್ರಕಾಶನ ಮತ್ತು ಸೇವಾ ಸಂಸ್ಥೆಯ ಆಶ್ರಯದಲ್ಲಿ ಕಾರವಾರದ ಸದಾಶಿವಗಡದ ದೇಸಾಯಿವಾಡಾದ ಅವರ ಮನೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾಯಿಲೆಯಿಂದ ಹಾಸಿಗೆ ಆಶ್ರಯಿಸಿದ ಗೋಪಾಲ ನಾಯ್ಕರನ್ನು ಈ ಸಂದರ್ಭದಲ್ಲಿ ಬೇಗ ಗುಣಮುಖರಾಗಲೆಂದು ಹಾರೈಸಲಾಯಿತು. ಸಂಸ್ಥೆಯ ಸದಸ್ಯರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರ ಹಾಗೂ ಬರಹಗಾರರಾದ ದೇವಿದಾಸ ಸುವರ್ಣ, ಬೀರಣ್ಣ ನಾಯಕ ಮೊಗಟಾ, ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಪಿ.ಎಸ್.ರಾಣೆ, ಸರಿತಾ(ರಾಧಾ) ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.