ಯಲ್ಲಾಪುರ : ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವಿಪಾಲ್ಯ ಭ್ರಷ್ಟಾಚಾರ ಹಾಗೂ ಇತ್ತೀಚೆಗೆ ಕಾಂಗ್ರೆಸ್ ಮೇಳ ಘಟಕ ಬಿಜೆಪಿ ವಿರುದ್ಧ ನೀಡಿದ ಹೇಳಿಕೆಯ ವಿರುದ್ಧ ತಾಲೂಕ ಬಿಜೆಪಿ ಮಹಿಳಾ ಘಟಕದ ಪ್ರಮುಖರು ತೀವೃವಾಗಿ ಖಂಡಿಸಿದರು.
ಪಟ್ಟಣದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ, "ಲೋಕಸಭಾ ಚುನಾವಣೆಯ ನಂತರ ಯಾವುದೇ ಖಾತೆಗೆ ಗ್ರಹಲಕ್ಷ್ಮೀ ಹಣ ಬಂದಿಲ್ಲ. ಎಸ್‌ಸಿ, ಎಸ್‌ಟಿ ಹಣ ಹಂಚಿಕೆಯಲ್ಲಿ ಬ್ರಷ್ಟಾಚಾರ ನಡೆಯುತ್ತಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸುವ ಕಾಂಗ್ರೆಸ್ ಪಕ್ಷವು ವಾಲ್ಮೀಕಿ ನಿಗಮದಲ್ಲಿ ಬ್ರಷ್ಟಾಚಾರ ಮಾಡಿ ಅವರನ್ನು ಅವಮಾನ ಮಾಡುತ್ತಿದೆ", ರಾಜ್ಯದ ಜನರು ಈ ಬ್ರಷ್ಟ ಸರ್ಕಾರವನ್ನು ತೊಲಗಿಸಲು ಕಾಯುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಶ್ರುತಿ ಹೆಗಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಲೂಟಿಕೋರ ಮತ್ತು ಸುಳ್ಳುಕೋರ ಸರಕಾರದ ಪರವಾಗಿ ಯಲ್ಲಾಪುರ ಕಾಂಗ್ರೆಸ್ ಮಹಿಳಾ ಘಟಕ ಹೇಳಿಕೆ ನೀಡಿರುವುದು ಅಪಹಾಸ್ಯಕ್ಕೆ ಈಡು ಮಾಡಿದೆ., "ಮೂಡಾ ವಾಲ್ಮಿಕಿ ಹಗರಣದಲ್ಲಿ ಭಾಗಿಯಾಗಿ ವ್ಯಾಪಕ ಬ್ರಷ್ಟಾಚಾರದಲ್ಲಿ ತಮ್ಮದೇ ಸರ್ಕಾರ ಇದ್ದು ಅವರ ಪರವಾಗಿ ಮಾತನಾಡಿರುವುದು ಖಂಡನೀಯ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಹೇಳಿಕೆಗಳನ್ನು ಖಂಡಿಸಿದರು. "ಪಂಚ ಯೋಜನೆ ಪಂಕ್ಚರ್ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಕಾಂಗ್ರೆಸ್ ಸರ್ಕಾರವು ದುಡಿದು ತಿನ್ನುವ ಕೈಗಳಿಗೆ ಬೇಡುವಂತಹ ಸ್ಥಿತಿಯನ್ನು ತಂದಿದೆ", ಅವರು ಮೂಡಾ ಹಗರಣದ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಪ.ಪಂ ಸದಸ್ಯೆ ಶ್ಯಾಮಲಿ ಪಾಟಣಕರ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಮುಖ್ಯ ವೇದಿಕೆಗೆ ತರುವ ಕಾರ್ಯ ನಡೆದಿಲ್ಲ, ಮೊದಲ ಪತ್ರಿಕಾಗೋ಼ಷ್ಠಿ ಅಪಹಾಸ್ಯಕ್ಕಿಡಾಗೊದೆ. ಎಂದು ಹೇಳಿದ ಅವರು, "ಕಾಂಗ್ರೆಸ್ ಪಕ್ಷ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ ಹಗರಣ ಮಾಡಿದ್ದು, ದಲಿತರಿಗೆ ಅನ್ಯಾಯ ಮಾಡಿದೆ" ಎಂದು ಅವರು ಹೇಳಿದರು.
ತಾಲೂಕಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುನಂದಾ ಮರಾಠೆ ಮತ್ತು ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹೇಮಲತಾ ಹೆಗಡೆ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆಬಂದ ನಂತರ ಗ್ರಾಮೀಣ ಭಾಗದ ಅಭಿವೃದ್ಧಿಯ ಹಿನ್ನಡೆಯಾಗಿದೆ.. "ಗ್ರಹಲಕ್ಷ್ಮೀ ಯೋಜನೆಯಡಿ ಎರಡು ತಿಂಗಳಿಂದ ಹಣ ಬಂದಿಲ್ಲ, ಮತ್ತು ಗ್ರಹಜ್ಯೋತಿ ವಿದ್ಯುತ್ ಬಿಲ್ 700-800 ರೂ ಹೆಚ್ಚು ಹಾಕಲಾಗುತ್ತಿದೆ", ಪಂಚ ಯೋಜನೆ ಹಣ ಬಾರದೇ ಇರುವ ಕಾರಣಕ್ಕೆ, "ಮನೆಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ" ಬ್ರಿಟೀಷ ಆಡಳಿತ ದೇಶ ಒಡೆದರೇ ಕಾಂಗ್ರೆಸ್ ಪಕ್ಷ ಕುಟುಂಬ ಒಡೆಯುವ ಕಾರ್ಯ ಮಾಡುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಾ ನಾಯ್ಕ ಇದ್ದರು.