Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Saturday, 10 August 2024

ಗ್ರಹಲಕ್ಷ್ಮೀ ಹಣ ಹಿಂದೂ ಹೆಣ್ಣುಮಗಳಿಗೆ ಸಿಗುವಂತೆ ಮಾಡಿದ ಮುಸ್ಲಿಂ ಸಾಮಾಜಿಕ ಕಾರ್ಯಕರ್ತ


ಯಲ್ಲಾಪುರ : ಹಿಂದೂ ಹೆಣ್ಣು ಮಕ್ಕಳು ಒಬ್ಬಳಿಗೆ ತಾಂತ್ರಿಕ ಗೊಂದಲ ಕಾರಣಕ್ಕಾಗಿ ಮುಸ್ಲಿಂ ಸಾಮಾಜಿಕ ಕಾರ್ಯಕರ್ತನೋರ್ವ ಎಲ್ಲ ರೀತಿಯ ಮಾರ್ಗದರ್ಶನ ನೀಡಿ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ದೊರಕಿಸಿ ಕೊಟ್ಟಿರುವ ಘಟನೆ ನಡೆದಿದೆ.

   ಪಟ್ಟಣದ ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹಮದ್ ಮಹಿಳೆಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸೈಬರ್ ಸೆಂಟರ್ ನಲ್ಲಿ ದಾಖಲಿಸಿ, ಆಕೆಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

    ಶಕೀಲ್ ಅಹ್ಮದ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೇ, ಹಲವಾರು ವಿದಾಯಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಉರ್ದು ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ ಹಮ್ಮಿಕೊಳ್ಳಲು ಮುಂಚೂಣಿಯಲ್ಲಿದ್ದರೆ, ಗೋಹತ್ಯಾ ನಿಷೇಧಿಸಿ ಸಹಿ ಸಂಗ್ರಹಣೆ ಮಾಡಿದ ಸಂದರ್ಭದಲ್ಲಿ ನೂರಾರು ಮುಸ್ಲಿಂ ಸಮಾಜದವರ ಮನವೊಲಿಸಿ ತಿಳುವಳಿಕೆ‌ ನೀಡಿ ಗೋಹತ್ಯಾ ನಿಷೇದಿಸುವಂತೆ ಜನರ ಸಹಿ ಸಂಗ್ರಹಿಸಿ ಕಳಿಸಿಕೊಟ್ಟಿದ್ದಾರೆ. 

   ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ತಾಲೂಕಿನಲ್ಲಿ ಮುಂಚೂಣಿಯಲ್ಲಿ ಇರುವ ಕಾರಣಕ್ಕಾಗಿ ಹಿಂದೂ ಸಂಘಟನೆಗಳು, ಸಮಿತಿಯವರು ಅವರ ಮನೆಗೆ ಆಗಮಿಸಿ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಮಂತ್ರಣ ನೀಡಿದ್ದರು.

   ಗ್ರಹಲಕ್ಷ್ಮಿ, ಗ್ರಹ ಜ್ಯೋತಿ, ಅಥವಾ ಇನ್ಯಾವುದೇ ಸರ್ಕಾರಿ ಯೋಜನೆಗಳನ್ನು ಪಡೆಯುವುದು ಹೇಗೆ ಎನ್ನುವುದರ ಕುರಿತು ಬಹಳಷ್ಟು ಜನರಿಗೆ ಗೊಂದಲ ಹೊಂದಿರುತ್ತಾರೆ. ಹೀಗಾಗಿ, ಮಾಹಿತಿ ಇಲ್ಲದೆ ಸರ್ಕಾರ ನೀಡುವ ಸೌಲಭ್ಯದಿಂದ ವಂಚಿತರಾಗುತ್ತಾರೆ. ಯಾವ ದಾಖಲೆಯನ್ನು ಒದಗಿಸಬೇಕು ಮತ್ತು ಹೇಗೆ ಒದಗಿಸಬೇಕು ಎನ್ನುವುದು ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ. ಕೆಲವೊಂದು ವಾಟ್ಸಪ್ ಯುನಿವರ್ಸಿಟಿ ವಿದ್ಯಾರ್ಥಿಗಳು ಕೂಡ ತಪ್ಪು ಮಾಹಿತಿ ನೀಡಿ ಸಿಗುವ ಸೌಲಭ್ಯವು ಸಿಗದಂತಹ ಸ್ಥಿತಿ ನಿರ್ಮಾಣ ಮಾಡುತ್ತಾರೆ. ಆಗ ನೆರವಿಗೆ ಬರುವವರು ಶಕೀಲ್ ಅಹ್ಮದ್ ನಂತವರು ಮಾತ್ರ.