Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Saturday, 3 August 2024

ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಟೆಂಡರ್: ಶ್ರೀರಂಗ ಕಟ್ಟಿಯವರ ಹೋರಾಟಕ್ಕೆ ಜಯ

ಯಲ್ಲಾಪುರ : ಯಲ್ಲಾಪುರದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ನಿರ್ಮಾಣದ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಮಾತೃಭೂಮಿ ಸಂಘಟನೆಯ ಪ್ರಮುಖರು ಮತ್ತು ಕಸಾಪ ಮಾಜಿ ಅಧ್ಯಕ್ಷರಾದ ಶ್ರೀರಂಗ ಕಟ್ಟಿಯವರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 
    ಅವರು ಹಲವಾರು ಬಾರಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಹಾಗೂ ಅಂದಿನ ಸಚಿವರಾದ ಶಿವರಾಂ ಹೆಬ್ಬಾರ್ ಅವರಿಗೆ, ಸಾರಿಗೆ ನಿಗಮದ ಹಿಂದಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿ‌ಎಸ್.ಪಾಟೀಲ್ ರಿಗೂ ಮನವಿ ಅರ್ಪಿಸಲಾಗಿತ್ತು.  ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಇರಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ, ಬುಕ್ ಸ್ಟಾಲ್ ಗೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯ ಮೂಲಕ ಕೂಡ ಒತ್ತಡಹಾಕಿದ್ದರು. ಆದರೆ, ಪುಸ್ತಕ ಮಳಿಗೆಗೆ ಟೆಂಡರ್ ಕರೆಯುವ ಪ್ರಕ್ರಿಯೆ ಮಾತ್ರ ನೆನೆಗುದಿಗೆ ಬಿದ್ದಿತ್ತು. ಈಗ ಎಲ್ಲ ಗೊಂದಲಗಳೂ ನಿವಾರಣೆಯಾಗಿವೆ. ಸದ್ಯದಲ್ಲಿಯೇ ಬಸ್ ನಿಲ್ದಾಣದಲ್ಲಿ ಪುಸ್ತಕ ಮಳಿಗೆ ಆರಂಭವಾಗಲಿದೆ.
  ಈ ಹೋರಾಟದ ಪರಿಣಾಮವಾಗಿ, ಕೆ ಎಸ್ ಆರ್ ಟಿ ಸಿ ನಿಗಮವು ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಟೆಂಡರ್ ಕರೆಯಿತು ಈ ಹೋರಾಟದಲ್ಲಿ ಸ್ಥಳೀಯ ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರಮುಖರು ಸಹ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಇರಬೇಕೆಂದು ಬೆಂಬಲ ನೀಡಿದ್ದರು. 
  ಇಂದಿನ ಶಾಸಕ ಶಿವರಾಂ ಹೆಬ್ಬಾರ್ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಶ್ರೀರಂಗ ಕಟ್ಟಿ, ಬುಕ್ ಸ್ಟಾಲ್ ಟೆಂಡರ್ ಆಗಿರುವುದನ್ನು ಸಂತಸದಿಂದ ಸ್ವೀಕರಿಸಿದ್ದಾರೆ. ಇದರಿಂದಾಗಿ, ವ್ಯಾಪಾರದ ಮನೋಧರ್ಮವಿಲ್ಲದೆ, ಈ ಬುಕ್ ಸ್ಟಾಲ್ ನಲ್ಲಿ ಕೇವಲ ಕನ್ನಡದ ಪತ್ರಿಕೆಗಳು ಮತ್ತು ಪುಸ್ತಕಗಳ ಮಾರಾಟವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
   ಈ ಸಂದರ್ಭದಲ್ಲಿ, "ಬುಕ್ ಸ್ಟಾಲ್ ಮಾಡಿರುವುದರಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ, ಮತ್ತು ವಿಚಾರಗಳ ಪ್ರಸಾರಕ್ಕೆ ಬಹಳಷ್ಟು ಸಹಾಯವಾಗಲಿದೆ," ಎಂದು ಅವರು ಹೇಳಿದ್ದಾರೆ. 
   ಶ್ರೀರಂಗ ಕಟ್ಟಿಯವರ ಹೋರಾಟದ ಈ ಜಯ ಯಲ್ಲಾಪುರದ ಜನತೆಗೆ ಮತ್ತು ಕನ್ನಡ ಪ್ರೇಮಿಗಳಿಗೆ ನಿಜಕ್ಕೂ ಒಂದು ಉತ್ಸಾಹವರ್ಧಕ ಬೆಳವಣಿಗೆಯಾಗಿದೆ.