ಯಲ್ಲಾಪುರ: ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್ ಅಶೋಕ ಭಟ್ ಅಧ್ಯಕ್ಷತೆಯಲ್ಲಿ 78ನೇ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ ಭಟ್ ಮಾತನಾಡಿ, "ದೇಶದ 78ನೇ ಸ್ವಾತಂತ್ರೋತ್ಸವ ನಮಗೆಲ್ಲರಿಗೂ ಹೆಮ್ಮೆ. ಧ್ವಜಾರೋಹಣ, ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮ, ಸಿಹಿ ಹಂಚುವ ಜವಾಬ್ದಾರಿ ಹಿಂದಿನ ವರ್ಷದಂತೆ ಸಂಬಂಧಿಸಿದ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸಬೇಕು. ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಮತ್ತು ಸರಿಯಾದ ಸಮಯಕ್ಕೆ ಆಚರಣೆಯಾಗಬೇಕು. ಸಾಧ್ಯವಾದಷ್ಟು ಎಲ್ಲರೂ ಬಿಳಿ ಸಮಸವಸ್ತ್ರ ಧರಿಸಿ ಬರಬೇಕು," ಎಂದರು.
ಸಾರ್ವಜನಿಕ ಧ್ವಜಾರೋಹಣವನ್ನು ಬೆಳಿಗ್ಗೆ 09.00 ಗಂಟೆಗೆ ತಾಲೂಕಾ ಕ್ರೀಡಾಂಗಣ, ಕಾಳಮ್ಮನಗರದಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ, ಪ್ಲಾಸ್ಟಿಕ್ ಧ್ವಜ ಬಳಕೆಯನ್ನು ನಿಷೇಧಿಸಲು ಸ್ಥಳೀಯ ಸಂಸ್ಥೆಗಳಿಗೆ, ತಾಲೂಕು ಕಿರಾಣಿ ಅಂಗಡಿ ವ್ಯಾಪಾರ ಸಂಘ ಸಂಸ್ಥೆಗಳಿಗೆ ಸೂಚನೆ ನೀಡಲಾಯಿತು. ಎಲ್ಲಾ ಸರಕಾರಿ ಕಚೇರಿಗಳನ್ನು ಸ್ವಚ್ಚಗೊಳಿಸಿ, ದೀಪಾಲಂಕಾರಗಳಿಂದ ಸಿಂಗರಿಸಬೇಕು. ಬೆಳಿಗ್ಗೆ 8-15ರೊಳಗೇ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ತಹಶೀಲ್ದಾರ್ ಕಚೇರಿಯಲ್ಲಿ ಧ್ವಜಾರೋಹಣ ನಂತರ, ತಾಲೂಕಾ ಕ್ರೀಡಾಂಗಣಕ್ಕೆ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕೆಂದು ತಿಳಿಸಲಾಯಿತು.
ಸಭೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಸಿ ಜಿ ನಾಯ್ಕ, ಪಿಎಸ್ಐ ಸಿದ್ದಪ್ಪ ಗುಡಿ, ಪ.ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ಹಿಂದುಳಿದ ವರ್ಗಗಳ ಅಧಿಕಾರಿ ದಾಕ್ಷಾಯಣಿ ನಾಯ್ಕ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಸಹಾಯಕ ಗ್ರಂಥಾಲಯ ಅಧಿಕಾರಿ ಎಫ್ ಎಚ್ ಬಾಸೂರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಪ್ರಕಾಶ ತಾರೀಕೊಪ್ಪ, ಕೀರ್ತಿ ಬಿ ಎಮ್, ಜೆ ಬಿ ನರೋಟಿ, ನಾಗರಾಜ ನಾಯ್ಕ, ನಾಗರಾಜ ಕಾರ್ತಿಕರ, ಹಾಗೂ ವಿವಿಧ ಸಂಘಟನೆಯ ಪ್ರಮುಖರಾದ ನಂದನ ಬಾಳಗಿ, ವೇಣುಗೋಪಾಲ ಮಧ್ಗುಣಿ, ಜಗನ್ನಾಥ ಮರಾಟೆ ಮತ್ತಿತರರು ಉಪಸ್ಥಿತರಿದ್ದರು.