ಯಲ್ಲಾಪುರ : ತೆಲಂಗಾರದಲ್ಲಿರುವ ವಿಶ್ವೇಶ್ವರ ನಾಯ್ಕ ಅವರ ಮನೆಯ ಹತ್ತಿರದ ಹುಲ್ಲಿನಬಣಿವೆಯಲ್ಲಿ ಅವಿತುಕೊಂಡಿದ್ದ 14 ಅಡಿಗಿಂತ ಹೆಚ್ಚು ಉದ್ದ ಮತ್ತು 12 ಕೆಜಿ ತೂಕದ ಕಾಳಿಂಗ ಸರ್ಪವನ್ನು ಅರಬೈಲ್ ಗ್ರಾಮದ ಯುವಕ ಸ್ನೇಕ್ ಸೂರಜ್ ಶೆಟ್ಟಿ ಶನಿವಾರ ಮಧ್ಯಾಹ್ನ ರಕ್ಷಿಸಿದರು. ಸುರಿಯುತ್ತಿದ್ದ ಮಳೆಯ ಮಧ್ಯೆಯೂ ಶೆಟ್ಟಿ ಅವರು ಧೈರ್ಯದಿಂದ ಸರ್ಪವನ್ನು ರಕ್ಷಿಸಿದ್ದಾರೆ.
ಬೀರಗದ್ದೆಯ ಹರೀಶ್ ಮಡಿವಾಳ ಮತ್ತು ಗೋಪಾಲ್ ಗೌಡ ಅವರು ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದರು. ಸೂರಜ ಶೆಟ್ಟಿ ಇದುವರೆಗೆ 15 ಕ್ಕಿಂತ ಹೆಚ್ಚು ಕಿಂಗ್ ಕೋಬ್ರಾ ಮತ್ತು 500 ಕ್ಕಿಂತ ಹೆಚ್ಚು ನಾಗರ ಹಾವುಗಳನ್ನು ರಕ್ಷಿಸಿದ್ದಾರೆ. ಅವರ ಧೈರ್ಯ ಮತ್ತು ಸರ್ಪಗಳ ಬಗ್ಗೆ ಅವರ ಜ್ಞಾನವು ಪ್ರಶಂಸಾರ್ಹವಾಗಿದೆ.