ಯಲ್ಲಾಪುರ: ತಾಲೂಕಿನ ಬೈಲಂದೂರ ಗ್ರಾಮದಲ್ಲಿ ಮನೆಯೊಂದರಲ್ಲಿ 22 ಜುಲೈ 2024 ರಂದು 1,43,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಲಕ್ಷ್ಮೀ ಸಂತೋಷ ದೇಸಾಯಿ ಆಗಸ್ಟ್ 8ರಂದು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಘಟನೆ ಲಕ್ಷ್ಮೀ ದೇಸಾಯಿ ಅವರು ಮನೆಯಿಂದ ಹೊರಗಿದ್ದ ವೇಳೆ, ಬೆಳಿಗ್ಗೆ 9:00 ರಿಂದ ಸಂಜೆ 4:30 ಗಂಟೆಗಳ ಅವಧಿಯಲ್ಲಿ ನಡೆದಿದ್ದು,
ಅವರ ಮನೆಯ ಬೀಗವನ್ನು ಯಾರೋ ಕಳ್ಳರು ಗಟ್ಟಿಯಾದ ವಸ್ತುವಿನಿಂದ ಮುರಿದು ಒಳನುಗ್ಗಿದ್ದಾರೆ. ಡ್ರಾವರ್‌ನಲ್ಲಿದ್ದ ಸುಮಾರು 1,43,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ. ಕಳ್ಳತನವಾದ ವಸ್ತುಗಳಲ್ಲಿ 16 ಗ್ರಾಂ ತೂಕದ ಲಕ್ಷ್ಮೀ ಸರ, 93,000 ರೂಪಾಯಿ ಮೌಲ್ಯ ಮತ್ತು ಒಂದೊಂದು ಜೊತೆ ಬಂಗಾರದ ಜುಮುಕಿ, ಬೆಂಡೋಲೆ, ಕಿವಿಯ ಸರಪಳಿಗಳ ಮೌಲ್ಯ 50,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳುವಾದ ಆಭರಣಗಳ ಬಗ್ಗೆ ತಕ್ಷಣ ಮನೆದವರೊಂದಿಗೆ ಚರ್ಚಿಸಿ, ಘಟನೆಯ ಬಗ್ಗೆ ಯಲ್ಲಾಪುರ ಠಾಣೆಗೆ ದೂರು ನೀಡಲು ವಿಳಂಬವಾಗಿದೆ. ಪ್ರಸ್ತುತ, ಕಳವು ಸಂಬಂಧಿಸಿದ ತನಿಖೆಯನ್ನು ಪಿಎಸ್ಐ ನಿರಂಜನ ಹೆಗಡೆ ನೇತೃತ್ವದಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ನಡೆಸುತ್ತಿದೆ.