ಯಲ್ಲಾಪುರ ಬಿಜೆಪಿ ಯುವ ಮೋರ್ಚಾದಿಂದ ಬೈಕ್ ಜಾಥಾ: 13-15 ರವರೆಗೆ ಹರ್ ಘರ್ ತಿರಂಗ್ ಅಭಿಯಾನ
ಯಲ್ಲಾಪುರ: ಬಿಜೆಪಿ ಯುವ ಮೋರ್ಚಾ ಯಲ್ಲಾಪುರ ವತಿಯಿಂದ ಕಂಪ್ಲಿ ಶಕ್ತಿ ಕೇಂದ್ರದ ಮಂಚೀಕೇರಿ ಮಟ್ಟದಲ್ಲಿ ಬುಧವಾರ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಮಂಡಳದ ಅಧ್ಯಕ್ಷ ಪ್ರಸಾದ ಹೆಗಡೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅಭಿಯಾನವು ಸ್ವಾತಂತ್ರ್ಯದ ಹಬ್ಬವನ್ನು ಮನಸ್ಸಿನಲ್ಲೂ ಹಾಗೂ ಮನೆಯಲ್ಲಿಯೂ ಶ್ರದ್ಧಯುತವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಆ. 13-15 ರವರೆಗೆ ಮನೆ ಮನೆಗೆ, ಮನ ಮನಕ್ಕೂ ತಿರಂಗಾ ಹಾರಿಸುವ ಅಭಿಯಾನವನ್ನು ಸಕ್ರಿಯವಾಗಿ ನಡೆಸುವಂತೆ ಬೂತ್ ಮಟ್ಟದಲ್ಲಿ ಸಂಘಟಕರುಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಅಂಗಡಿಗಳಿಗೆ ತಿರಂಗಾ ಧ್ವಜಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಂಡಳದ ಉಪಾಧ್ಯಕ್ಷ ಅರುಣ ಕುಮಾರ ಗೌಡರ್, ಯುವ ಮೋರ್ಚಾ ಅಧ್ಯಕ್ಷ ರಜತ್ ಬದ್ದಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು ಪ್ರಭು ಮತ್ತು ರಾಘು ಕುಂದರಗಿ, ಸದಸ್ಯ ನಯನ ಇಂಗಳೆ, ಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್, ಪ್ರಧಾನ ಕಾರ್ಯದರ್ಶಿ ಬಾಬಣ್ಣ, ಜಿ ಪಂ ಮಾಜಿ ಸದಸ್ಯ ರಾಘು ಭಟ್, ಗ್ರಾ.ಪಂ ಸದಸ್ಯ ರಘುಪತಿ ಭಟ್ ಮತ್ತು ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ ಬೆಂಗೇರಿ ಉಪಸ್ಥಿತರಿದ್ದರು.