ಯಲ್ಲಾಪುರ : ಶಿರಸಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಅವರನ್ನು ಶಿರಸಿಯ ಅವರ ಕಚೇರಿಯಲ್ಲಿ, ಹಿತ್ಲಳ್ಳಿ ಗ್ರಾ.ಪಂ.ವ್ಯಾಪ್ತಿಯ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.
ಕಾಮಗಾರಿ ಮಂಜೂರಾಗಿ, ಕಾರ್ಯಾದೇಶವಾಗಿದ್ದರೂ ಕೆಲಸ ನೆನೆಗುದಿಗೆ ಬಿದ್ದು, ಸಾರ್ವಜನಿಕರಿಗೆ ಅಪಾರ ತೊಂದರೆಯಾಗುತ್ತಿತ್ತು, ಗ್ರಾಮಸ್ಥರ ಹೋರಾಟದ ಫಲವಾಗಿ ಇತ್ತೀಚೆಗೆ ವ್ಯವಸ್ಥಿತವಾಗಿ ಪೂರ್ಣಗೊಂಡ ಮಂಚಿಕೇರಿಯ ಜೇನುಮುರಿ ಘಟ್ಟದಿಂದ ಯಡಳ್ಳಿ, ತೋಳಗೋಡು, ಹರಿಗದ್ದೆ ಮೂಲಕ ಹಿತ್ಲಳ್ಳಿಗೆ ಸಾಗುವ 11 ಕಿ.ಮೀ. ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತವಾಗಿ ಪೂರ್ಣಗೊಳಿಸಿಕೊಟ್ಟ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಅವರನ್ನು ಗೌರವಿಸಲಾಯಿತು.
ಪ್ರಮುಖರಾದ ವಿ.ಎಂ.ಹೆಗಡೆ, ನಾಗೇಂದ್ರ ಪತ್ರೇಕರ ಹುಲಿಮನೆ, ಗೋಪಾಲ ಹೆಗಡೆ ಜಾಗರಮನೆ, ಮಹಾಬಲೇಶ್ವರ ಗುಂಡಾನಜಡ್ಡಿ, ಪ್ರಶಾಂತ ಶಾಸ್ತ್ರಿ, ರತ್ನಾಕರ ಶೇಟ್, ಗಜಾನನ ಶಾಸ್ತ್ರಿ ತೋಳಗೋಡ, ಹಿತ್ಲಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ, ಮಂಜುನಾಥ ಶೇಟ್ ಪುರದಮನೆ, ಯಲ್ಲಾಪುರದ ಲೋಕೋಪಯೋಗಿ ಇಲಾಖೆಯ ನಿವೃತ್ತ ಎಇಇ ವಿ.ಎಂ.ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ಯಲ್ಲಾಪುರ : ಯಲ್ಲಾಪುರ ಆರಕ್ಷಕ ಠಾಣೆಗೆ ನೂತನವಾಗಿ ಆಗಮಿಸಿ, ಅಧಿಕಾರ ವಹಿಸಿಕೊಂಡ ಸಿ.ಪಿ.ಐ. ರಮೇಶ ಹಾನಾಪುರ ಮತ್ತು ಪಿ.ಎಸ್.ಐ. ಸಿದ್ದು ಗುಡಿ ಅವರನ್ನು ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಪಟ್ಟಣದ ಠಾಣೆಯಲ್ಲಿ ಜು.6 ರಂದು ಸನ್ಮಾನಿಸಿ, ಗೌರವಿಸಿದರು.
ಪ್ರಮುಖರಾದ ವಿ.ಎಂ.ಹೆಗಡೆ, ನಾಗೇಂದ್ರ ಪತ್ರೇಕರ ಹುಲಿಮನೆ, ಗೋಪಾಲ ಹೆಗಡೆ ಜಾಗರಮನೆ, ಮಹಾಬಲೇಶ್ವರ ಗುಂಡಾನಜಡ್ಡಿ, ಪ್ರಶಾಂತ ಶಾಸ್ತ್ರಿ, ರತ್ನಾಕರ ಶೇಟ್, ಗಜಾನನ ಶಾಸ್ತ್ರಿ ತೋಳಗೋಡ, ಹಿತ್ಲಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ, ಮಂಜುನಾಥ ಶೇಟ್ ಪುರದಮನೆ ಮತ್ತಿತರರು ಉಪಸ್ಥಿತರಿದ್ದರು.