ಯಲ್ಲಾಪುರ ; ತಾಲೂಕಿನ ಚವತ್ತಿ, ಬಾಳೆಹದ್ದ ಗ್ರಾಮದಲ್ಲಿ ಪತಿ ಕಾಣೆಯಾದ ಘಟನೆಗೆ ಸಂಬಂಧಿಸಿದಂತೆ ಕಾಣೆಯಾದತನ ಪತ್ನಿ ಬುಧವಾರ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಳೆಹದ್ದು ನಿವಾಸಿ, ಶ್ರೀಧರ ರಾಮಾ ಮೊಗೇರ(46) ಎಂಬಾತ ಜುಲೈ 8ರಂದು ಸಂಜೆ 6:00 ಗಂಟೆಗೆ ತಮ್ಮ ಮನೆಯಿಂದ ಹೊರಗಡೆ ಹೋದ ಮೇಲೆ ಮರಳಿ ಮನೆಗೆ ಬಂದಿಲ್ಲ, ಎಂದು ಸೌಭಾಗ್ಯ ಶ್ರೀಧರ ಮೊಗೇರ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಗಂಡನನ್ನು ಹುಡುಕಲು ಸಾಕಷ್ಟು ಪ್ರಯತ್ನಪಟ್ಟರೂ, ಅವರನ್ನು ಕಂಡುಹಿಡಿಯಲು ವಿಫಲವಾಗಿದ್ದೆವೆ. ಈ ಕಾರಣದಿಂದ ವಿಳಂಬವಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯಲ್ಲಾಪುರ ಠಾಣೆಯ ಪಿಎಸ್ಐ ಸಿದ್ದಪ್ಪ ಗುಡಿ ಅವರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಪ್ರಾರಂಭಿಸಿದ್ದಾರೆ.
ಯಲ್ಲಾಪುರ ; ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಶ್ಯಾಮ್ ಪಾವಸ್ಕರ್ ಯಲ್ಲಾಪುರದ ಶಾರದಾಗಲ್ಲಿಯ ನಿವಾಸಿ ತೌಫಿಕ್ ಶೇಖ್(22);ಎನ್ನುವವರು ಗಾಂಜಾ ಮಾದಕ ವಸ್ತು ಸೇವನೆಯ ಆರೋಪ ದಾಖಲಿಸಿದ್ದಾರೆ.
ಪಟ್ಟಣದ ಬಿಲಾಲ್ ಮಸೀದಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಜುಲೈ 10ರಂದು ತೌಫಿಕ್ ಶೇಖ ಗಾಂಜಾ ಸೇವನೆ ಮಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸಂದರ್ಭದಲ್ಲಿ, ಪಿಎಸ್‌ಐ ಶ್ಯಾಮ ಪಾವಸ್ಕರ್ ಅವರ ನೇತೃತ್ವದಲ್ಲಿ ತೌಫಿಕ್‌ನನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ವರದಿ ಪ್ರಕಾರ, ತೌಫಿಕ್ ಗಾಂಜಾ ಸೇವನೆ ಮಾಡಿದನ್ನು ದೃಢಪಟ್ಟಿದೆ.
ಗಾಂಜಾ ಸೇವನೆಯ ಮಾಹಿತಿ ದೃಢಪಟ್ಟ ಹಿನ್ನೆಲೆಯಲ್ಲಿ, ಮಹಿಳಾ ಹೆಡ್ ಕಾನ್ಸಟೇಬಲ್ ರೇಣುಕಾ ಬೆಳಗಟ್ಟಿ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಆ್ಯಕ್ಟ್ ಕಲಂ 27 (ಬಿ) ಅಡಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.