ಯಲ್ಲಾಪುರ : ಪ್ರಸ್ತುತ ವರ್ಷದ ಸಿಎ ಪರೀಕ್ಷೆಯಲ್ಲಿ ಅಂಕೋಲಾ ತಾಲೂಕಿನ ಶೆವಕಾರ, ಹೆಗಡೆಕೊಪ್ಪದ ಗಣೇಶ ಶ್ರೀಧರ ಭಟ್ಟ ಸಿಎ (ಚಾರ್ಟರಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ತೆರ್ಗಡೆಯಾಗಿದ್ದಾನೆ.
ಶೆವಕಾರ, ಹೆಗಡೆಕೊಪ್ಪದ ಶ್ರೀಧರ್ ಭಟ್ ಹಾಗೂ ಸಾವಿತ್ರಿ ಭಟ್ ದಂಪತಿಗಳ ಪುತ್ರನಾಗಿರುವ ಶ್ರೀಧರ ಭಟ್, ಎಲ್ಲಾಪುರದ ಐ ಟಿ ಎಸ್ ಎಸ್ ಕನ್ನಡ ಮಾಧ್ಯಮದ ಪ್ರೌಢಶಾಲೆಯಲ್ಲಿ ಓದಿರುವ ಮಾಜಿ ವಿದ್ಯಾರ್ಥಿಯಾಗಿದ್ದಾನೆ.
ಈತನ ಸಾಧನೆಗೆ ಪಾಲಕರು ಊರಿನ ನಾಗರಿಕರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
ಯಲ್ಲಾಪುರ: ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಹೊಸ ಶೈಕ್ಷಣಿಕ ಸಾಲಿಗೆ ನಡೆದ ವಿದ್ಯಾರ್ಥಿ ಸಂಸತ್ತು ಚುನಾವಣೆಯ ಉದ್ಘಾಟನೆ ಕಾರ್ಯಕ್ರಮವನ್ನು ಗುರುವಾರ ಸಂಸ್ಥೆಯ ಸಂಸ್ಥೆಯ ಸಿಇಓ ಅಜಯ ಭಾರತೀಯ ಉದ್ಘಾಟಿಸಿದರು.
ಅವರು, ದೇಶ ಸೇವೆಗೆ ಜೀವನದ ಸ್ವಲ್ಪ ಸಮಯ ಮೀಸಲಿಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಿ ಯು ಕಾಲೇಜಿನ ಉಪನ್ಯಾಸಕಿ ಕವಿತಾ ಹೆಬ್ಬಾರ, ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದವರು ಶಾಲಾ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವಿದ್ಯಾರ್ಥಿಗಳಿಗೆ ಕರ್ತವ್ಯದ ಪಟ್ಟಿ ಹಸ್ತಾಂತರಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶ್ಯಾಮಲಾ ಕೆರೆಗೆದ್ದೆ ಪ್ರಮಾಣವಚನ ಬೋಧಿಸಿದರು.
ಮೇಧಾ ಭಟ್ ಪ್ರಾರ್ಥಿಸಿದರು, ಭುವನೇಶ್ವರಿ ಗೌಡ ನಿರೂಪಿಸಿದರು, ಅರ್ಪಿತಾ ಹೆಗಡೆ ಸ್ವಾಗತಿಸಿದರು, ಮಂಜುನಾಥ ಸಿ ವಂದಿಸಿದರು.
ಸರ್ಕಾರಿ ನೌಕರರ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟ
ಯಲ್ಲಾಪುರ ; ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 2024-25 ರ ಅವಧಿಯ ಚುನಾವಣೆಗೆ ಕರಡು ಮತದಾರರ ಪಟ್ಟಿಯನ್ನು ಬುಧವಾರ ನೌಕರರ ಭವನದಲ್ಲಿ ಪ್ರಕಟಿಸಿಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಶರಣಪ್ಪ ಗೊಜನೂರ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ರಾಜ್ಯ ಕಾರ್ಯಕಾರಿ ಸಮಿತಿಯು ಕೈಗೊಂಡ ಸರ್ವಾನುಮತದ ನಿರ್ಣಯದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2024 ರಿಂದ 2029 ನೇ ಸಾಲಿನ ಅವಧಿಗೆ ಎಲ್ಲಾ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲಾ ನಿಯಮ 47ರ ರೀತ್ಯ ಕರಡು ಮತದಾರರ ಪಟ್ಟಿಯನ್ನು ಯಲ್ಲಾಪುರ ತಾಲೂಕಿನ ಎಲ್ಲ ಇಲಾಖೆಗಳಿಂದ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವಿವರದಂತೆ ಇಂದು ಜುಲೈ 10 ರಂದು ಕರಡು ಮತದಾರರ ಪಟ್ಟಿಯನ್ನು ತಾಲೂಕ ಶಾಖೆ ಯಲ್ಲಾಪುರದ ನೌಕರರ ಭವನದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಶರಣಪ್ಪ ಗೊಜನೂರ ಹಾಗೂ ಕಾರ್ಯದರ್ಶಿ ಸಂಜೀವ ಹೊಸ್ಕೇರಿ ತಿಳಿಸಿದ್ದಾರೆ.