ಯಲ್ಲಾಪುರ : ಬೆಂಗಳೂರಿನ ಪೊಲೀಸರಿಗೆ ತಲೆ ನೋವಾಗಿರುವ ಸೈಬೇರಿಯನ್ ವಿದ್ಯಾರ್ಥಿಗಳ ಡ್ರಗ್ಸ್ ದಂದೆಯಂತೆ, ನಿಮ್ಮ ಮೊಬೈಲ್ ನಲ್ಲಿ ಹುಳುಗಳಂತೆ ಹೊಕ್ಕಿ ನಿಮ್ಮ ಮೊಬೈಲ್ ಡಾಟಾ ಹಣಕಾಸಿನ ವ್ಯವಹಾರಗಳ ಟ್ರ್ಯಾಕ್ ಮಾಡುತ್ತಿರುವ ಸೈಬಿರಿಯನ್ ಹೂಳುಗಲಕು. ಯಲ್ಲಾಪುರ ನ್ಯೂಸ್ ನ ಹಲವು ಗ್ರೂಪ್ ಗಳಲ್ಲಿ ಹೊಕ್ಕಿದ್ದು ಸೈಬರಿಯನ್ ಐಎಸ್‌ಡಿ ನಂಬರ್ +234..... ಸಂಖ್ಯೆ ಹಲವಾರು ನಂಬರ್ ಗಳನ್ನು ತೆಗೆದು ಹಾಕಲಾಗಿದೆ.
ಡ್ರಗ್ಸ್ ಸಾಗಾಣಿಕೆ, ತಯಾರಿಕೆ ಮುಂತಾದ ಅಂತರಾಷ್ಟ್ರೀಯ ಅಪರಾಧಿಕ ಚಟುವಟಿಕೆಗಳಲ್ಲಿ ಅತ್ಯಂತ ಮುಂದಿರುವ ಸೈಬೇರಿಯನ್ ಮಾಫಿಯಾಗಳು, ಇದೀಗ ಮೊಬೈಲ್ಗಳಲ್ಲಿ ಕೂಡ ಅನಗತ್ಯ ಲಿಂಕುಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಸೈಬೀರಿಯಾದ ಸೈಬರ್ ಕ್ರೈಂ ದಂಧೆಯು ಇದೀಗ ಮೊಬೈಲ್ ಗ್ರೂಪ್ ಗೂ ಪಾದಾರ್ಪಣೆ ಮಾಡಿದೆ. ಸಾಮಾಜಿಕ ಜಾಲ ತಾಣಗಳಾದ ವಾಟ್ಸಪ್, ಮೆಸೆಂಜರ್ ಸೇರಿದಂತೆ ಹಲವು ಗ್ರೂಪ್‌ಗಳಲ್ಲಿ ಅಪಾಯಕಾರಿ ಲಿಂಕ್‌ಗಳನ್ನು ಹರಿಬಿಡುವ ಮೂಲಕ ಸೈಬರ್ ಕ್ರಿಮಿನಲ್ಸ್ ಹ್ಯಾಕಿಂಗ್ ಕೃತ್ಯಗಳಲ್ಲಿ ತೊಡಗಿದ್ದಾರೆ. ಈ ಮೂಲಕ, ಇವರು ಅನೇಕ ಫೋನ್ ನಂಬರಗಳನ್ನು ಕದಿಯುತ್ತಾರೆ, ನಿಮಗೆ ಅಪಾಯಕಾರಿ ಲಿಂಕ್ ಕಳಿಸುವ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡುತ್ತಾರೆ. ಯಲ್ಲಾಪುರ ನ್ಯೂಸ್ ವಾಟ್ಸಪ್ ಗ್ರೂಪ್ ನ ಬೇರೆ ಬೇರೆ ಗ್ರೂಪ್ ಗಳಲ್ಲಿ ಕಳ್ಳ ಮಾರ್ಗ ಮೂಲಕ ನುಸೂಳಿದ್ದ ಐದು ಜನ ಹ್ಯಾಕರ್ ಗಳನ್ನು ಈಗಾಗಲೇ ರಿಮೋವ್ ಮಾಡಲಾಗಿದೆ. ಅದರಲ್ಲಿ ಎರಡು ನಂಬರ್ ಗಳು ಕಾಮನ್ ಆಗಿದ್ದವು.
ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ಕಂಡುಬರುವ ಫೋನ್ ಸಂಖ್ಯೆಗಳು +234 ರಿಂದ ಪ್ರಾರಂಭವಾಗುತ್ತವೆ. ಈ ಸಂಖ್ಯೆಗಳಿಂದ ಕರೆ ಅಥವಾ ಮೆಸೆಜ್ ಬಂದರೆ ಎಚ್ಚರಿಕೆ ವಹಿಸಬೇಕು. ಈ ಹ್ಯಾಕರ್‌ಗಳು ಗುಂಪಿನ ಸದಸ್ಯರು ಅಥವಾ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ದೇವರ, ಅಥವಾ ಭಾರತ ಮಾತೆಯ ಪ್ರೊಫೈಲ್ ಚಿತ್ರಗಳನ್ನು ಬಳಸಿಕೊಂಡು ತಮ್ಮ ಪ್ರೊಫೈಲ್ ಚಿತ್ರಗಳನ್ನು ರಚಿಸುತ್ತಾರೆ. ಹಿಂದೂ ದೇವರುಗಳು ಅಥವಾ ಗುಂಪಿನಲ್ಲಿರುವ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರ ದೇವರ ಚಿತ್ರಗಳನ್ನು ಬಳಸುವುದರಿಂದ ಜನರು ಹೆಚ್ಚಾಗಿ ಸಂಶಯ ಪಡುವುದಿಲ್ಲ ಹೀಗಾಗಿ ಅವರ ಉದ್ದೇಶ ಈಡೇರುವ ಸಾಧ್ಯತೆಯಿದೆ.
+234 ರಿಂದ ಪ್ರಾರಂಭವಾಗುವ ಯಾವುದೇ ಸಂಖ್ಯೆಯನ್ನು ಗುಂಪಿನಿಂದ ತಕ್ಷಣವೇ ಬ್ಲಾಕ್ ಮಾಡಿ ಮತ್ತು ತೆಗೆದುಹಾಕಿ. ಗುಂಪಿನ ಆಹ್ವಾನ ಲಿಂಕ್(ಇನ್ವೈಟ್ ಲಿಂಕ್) ಅನ್ನು ಆಗಾಗ್ಗೆ ಬದಲಾಯಿಸಿ ರಿಸೆಟ್ ಮಾಡಿ.
ವಾಟ್ಸಪ್ ಸದಸ್ಯರು ಪರಿಚಯವಿಲ್ಲದ ಸಂಖ್ಯೆಗಳಿಗೆ ಉತ್ತರಿಸಬೇಡಿ. ಯಾವುದೇ ಅಪರಿಚಿತ, ಅಥವಾ ಅಂತರಾಷ್ಟ್ರೀಯ ಸಂಖ್ಯೆಯಿಂದ ಬಂದ ಯಾವುದೇ ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಆಫರ್, ಬಹುಮಾನ, ಹಣದ ಆಸೆಗೆ ಬಿದ್ದು ನಿಮ್ಮನ್ನು ನೀವು ಹ್ಯಾಕರ್ ಗಳ ಕೈವಶವಾಗಲು ಬಿಡಬೇಡಿ. ಒಂದೆ ರೀತಿಯಲ್ಲಿ ಕಾಣಿಸುವ (ಸಿಮಿಲರ್ ಆಗಿರುವ) ಉದಾಹರಣೆಗೆ ಸರಕಾರದ ವೆಬ್ ಸೈಟ್‌ಗಳು ಅದರನ್ನು ಕರ್ನಾಟಕ ರಾಜ್ಯ ಸರ್ಕಾರದ ಹಲವು ಕಲ್ಯಾಣ ಯೋಜನೆಯ ವೆಬ್ ಸೈಟ್ ಲಿಂಕ್ ಗಳಂತೆ ಕಂಡು ಬರುವ ವೆಬ್ ಸೈಟ್ ಗಳಲ್ಲಿ ನಿಮ್ಮ ಎಲ್ಲ ವಿವರಗಳನ್ನು ಭರ್ತಿ ಮಾಡಬೇಡಿ. ಸರಿಯಾಗಿ ಇದು ಸರ್ಕಾರದ ವೆಬ್ಸೈಟ್ ಎಂದು ದೃಢಪಡಿಸಿಕೊಂಡು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಪಾಸ್ ಬುಕ್ ನಂಬರ್, ಇನ್ನಿತರ ಮಾಹಿತಿಯನ್ನು ತುಂಬಿ. ಅಮೇಜಾನ್, ಪ್ಲಿಪ್ ಕಾರ್ಟ್, ಜಿಯೋ ಮಾರ್ಟ್ ಮುಂತಾದವುಗಳು ಮೂಲ ವೆಬ್ಸೈಟ್ ಗೆ ಹೋಲುವಂತಹ ರೀತಿಯಲ್ಲಿ ರಚಿಸಲಾಗಿದ್ದು ಇವುಗಳ ಬಗ್ಗೆ ಕೂಡ ಜಾಗೃತೆ ವಹಿಸಬೇಕು. ಲಿಂಕ್ ಮೂಲಕ ಬರುವ ಯಾವುದೇ ಅಪರಿಚಿತ ಅಪ್ಲಿಕೇಶನ್‌ಗಳನ್ನು ಮೊಬೈಲ್ ನಲ್ಲಿ ಸ್ಥಾಪಿಸಬೇಡಿ. ಸ್ಮಾರ್ಟ್ ಮೊಬೈಲ್ ಬಳಸುವವರು, ಈ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಸುರಕ್ಷತರಾಗಿರಬೇಕು. ಈ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸೈಬರ್ ಅಪರಾಧಿಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ.
ನಿಮ್ಮ ಯಲ್ಲಾಪುರ ನ್ಯೂಸ್ ವಾಟ್ಸಪ್ ಗ್ರೂಪ್ ಸುರಕ್ಷಿತವಾಗಿದೆ, ನಿಯಮಿತವಾಗಿ ನಾವು ನಮ್ಮ ವಾಟ್ಸಪ್ ಗ್ರೂಪ್ ಗಳನ್ನು ಪರಿಶೀಲಿಸುತ್ತಿರುತ್ತೇವೆ. ಸಂಶಯಾಸ್ಪದ ವ್ಯಕ್ತಿಗಳು, ಗ್ರೂಪ್ನಲ್ಲಿ ನಂಬರ್ ಗಳನ್ನು ಪತ್ತೆ ಹಚ್ಚಿ ಅವರನ್ನು ತೆಗೆದು ಹಾಕುತ್ತೆವೆ. ಕಿರುಕುಳ ನೀಡುವಂತಹ ಜನರನ್ನು ಗುರುತಿಸಿ ಅವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೆವೆ. ಮಹಿಳೆಯರಿಗಾಗಿ ಯಲ್ಲಾಪುರ ನ್ಯೂಸ್ ನಲ್ಲಿ ಪ್ರತ್ಯೇಕ ಗ್ರೂಪ್ ಗಳನ್ನು ಮಾಡಲಾಗಿದೆ. ಮಹಿಳೆಯರಿಗಷ್ಟೆ ಆ ಗ್ರೂಪ್ ನಲ್ಲಿ ಪ್ರವೇಶವಿದ್ದು, ರಿಕ್ವೆಸ್ಟ್ ಬಂದ ನಂಬರಗಳನ್ನು ಹಲವಾರು ರೀತಿಯಲ್ಲಿ ಪರಿಶೀಲಿಸಿ ನಂತರ ಸೇರಿಸುತ್ತೆವೆ.
ಅಷ್ಟಕ್ಕೂ ನಮ್ಮ ಓದುಗರಿಗೆ ತಮ್ಮ ಗ್ರೂಪ್ ಗಳಲ್ಲಿ ಸಂಶಯಾಸ್ಪದ ನಂಬರ್ ಗಳು ಕಂಡುಬಂದರೆ ನನಗೆ(ಎಡ್ಮಿನ್) ವಾಟ್ಸಪ್ ಮಾಡಿ ನಂಬರನ್ನು ತಿಳಿಸಿದರೇ, ಅಂತಹ ನಂಬರನ್ನು ಪರಿಶೀಲಿಸಿ ಆ ಗ್ರೂಪ್ ನಿಂದ ಅವರನ್ನು ತೆಗೆದು ಹಾಕಲಾಗುವುದು.