ಯಲ್ಲಾಪುರ : ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಡ ಬಿದ್ದ ಬಾಸಲ್ ಗ್ರಾಮದ ಹುಟ್ಟುರ್ತಿ, ಬಾಸಲ್ ಗ್ರಾಮ ಹಾಗೂ ತಳಕೆಬೈಲ್ ಲೋಕೋಪಯೋಗಿ ರಸ್ತೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ ಉಪಸ್ಥಿತಿಯಲ್ಲಿ ಉಪಸ್ಥಿತಿಯಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಗೂ ಕಾರ್ಮಿಕರು ರಸ್ತೆಯನ್ನು ತಾತ್ಕಾಲಿಕವಾಗಿ ಕಡಿ ತುಂಬಿ ದುರಸ್ತಿ ಮಾಡಿದರು.
ಇತ್ತೀಚೆಗೆ ಮಳವಳ್ಳಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅನುಪಸ್ಥಿತಿಯಲ್ಲಿ ಸಾರ್ವಜನಿಕರು ರಸ್ತೆ ಹಾಳಾಗಿದ್ದರು ಕುರಿತು ಮನವಿ ನೀಡಿ, ಅಧಿಕಾರಿಗಳ ಅನುಪಸ್ಥಿತಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ತಳಕೆಬೈಲ್, ಬಾಸಲ್ ಹುಟ್ಟೂರ್ತಿ ಗ್ರಾಮಗಳಿಗೆ ಕೆಎಸ್ಆರ್ಟಿಸಿ ಬಸ್ ಗಳು ಚಾಲಕರು ತೆರಳಲು ಅನುಮಾನ ವ್ಯಕ್ತಪಡಿಸಿ ಅರ್ಧದಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಂದಾಗಿ ರೋಸಿ ಹೋಗಿದ್ದ ಸಾರ್ವಜನಿಕರು ಗ್ರಾಮ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕಾರಣಕ್ಕಾಗಿ ಶುಕ್ರವಾರ ರಸ್ತೆ ಕಾರ್ಮಿಕರೊಂದಿಗೆ ಸ್ಥಳಕ್ಕೆ ಆಗಮಿಸಿದ ರಸ್ತೆಯಲ್ಲಿಯ ಹೊಂಡ ಮುಚ್ಚಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಳೆಗಾಲ ಮುಗಿದ ನಂತರ ಶಾಸಕರನ್ನು ಸಂಪರ್ಕಿಸಿ ಮಾವಿನಮನೆ ವ್ಯಾಪ್ತಿಯ ಕೊಂಡ ಬಿದ್ದ ರಸ್ತೆಗಳನ್ನು ಶಾಶ್ವತವಾಗಿ ದುರಸ್ತಿ ಮಾಡಲಾಗುವುದು ಎಂದು ಸುಬ್ಬಣ್ಣ ಕುಂಟೆಗಾಳಿ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚೇತನ ಇದ್ದರು.
ಯಲ್ಲಾಪುರ ; ಹುಬ್ಬಳ್ಳಿಯ ಉಎಸ್‌ಜಿಎಮ್ ಆಯ್(ಕಣ್ಣಿನ) ಬ್ಯಾಂಕ್ ಮತ್ತು ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಯಲ್ಲಪುರದ ದ್ರಷ್ಟಿ ಕೇಂದ್ರ ಹಾಗೂ ಇಡಗುಂದಿ ಗ್ರಾಮ ಪಂಚಾಯತಿಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಇಡಗುಂದಿಯ ಸಮಾಜದ ಮಂದಿರದಲ್ಲಿ ಜುಲೈ 16ರಂದು ಬೆಳಿಗ್ಗೆ 10.30 ಗಂಟೆಗೆ ಆಯೋಜಿಸಲಾಗಿದೆ,
ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಗ್ರಾಮ ಪಂಚಾಯತ ಇಡಗುಂದಿ ವಿನಂತಿಸಿದೆ. ಶಿಬಿರಕ್ಕೆ ಬರುವಾಗ ಆಧಾರ ಕಾರ್ಡ್, ರೇಷನ್ ಕಾರ್ಡ್, ಯಶಸ್ವಿನಿ, ಅರೋಗ್ಯ ರಕ್ಷಾ, ಇಎಸ್‌ಐ ಹೆಲ್ತ್ ಇನ್ಶೂರೆನ್ಸ್ ಇದ್ದಲ್ಲಿ ತೆಗೆದುಕೊಂಡು ಬರಬೇಕು. ಅಗತ್ಯ ಇದ್ದವರಿಗೆ ರಿಯಾಯಿತಿ ಯಲ್ಲಿ ಆಪರೇಷನ್ ಮಾಡಲಾಗುವುದು ಅಂತಾಎಂದು ತಿಳಿಸಿದ್ದಾರೆ.
ಯಲ್ಲಾಪುರ : ಜುಲೈ 13 ಶನಿವಾರ, 11 ಕೆವಿ ಬಿಳಕಿ ಮಾರ್ಗದ ನಿರ್ವಹಣೆ ಕಾಮಗಾರಿ ನಡೆಯುವ ಕಾರಣ, ಹಾಸಣಗಿ ಮತ್ತು ಕಂಪ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಸಾರ್ವಜನಿಕರು ಸಹಕರಿಸಬೇಕೆಂದು ಯಲ್ಲಾಪುರ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮನವಿ ಮಾಡಿದ್ದಾರೆ.