ಯಲ್ಲಾಪುರ : ತಟಗಾರ್ ಕ್ರಾಸ್ ಬಳಿಯ ಗಣಪತಿ ಗಲ್ಲಿಯ ಅಂಗನವಾಡಿ ಎದುರು ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ಮರದ ದೊಡ್ಡ ಟೊಂಗೆ ಬಾಗಿಕೊಂಡಿದ್ದು, ಯಾವಾಗಲಾದರೂ ಕಿತ್ತು ಬೀಳುವ ಸಾಧ್ಯತೆ ಇದೆ. ಇದು ಅಂಗನವಾಡಿಗೆ ಬರುವ ಸಣ್ಣ ಮಕ್ಕಳ ಪಾಲಕರಲ್ಲಿ ಆತಂಕವನ್ನುಂಟು ಮಾಡಿದೆ.
ಬಾಗಿರುವ ಟೊಂಗೆಯ ಕೆಳಗೆ ವಿದ್ಯುತ್ ಸರ್ವಿಸ್ ಲೈನ್ ಕೂಡ ಇದೆ. ಲೈವ್ ವಿದ್ಯುತ್ ತಂತಿ ಟೊಂಗೆಯೊಂದಿಗೆ ನೆಲದ ಮೇಲೆ ಬಿದ್ದರೆ, ನೀರು ತುಂಬಿದ ನೆಲದಲ್ಲಿ ಮಕ್ಕಳಿಗೆ ಮತ್ತು ಮಕ್ಕಳನ್ನು ಬಿಡಲು ಬರುವ ಪಾಲಕರಿಗೆ ಅಪಾಯವಾಗುತ್ತದೆ.
ಈ ಪರಿಸ್ಥಿತಿಯು ಪೋಷಕರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಮಕ್ಕಳು ಭಯದಿಂದ ಅಂಗನವಾಡಿಗೆ ಕಳಿಸಲಾಗುತ್ತಿದೆ. ಮರದ ಕೊಂಬೆ ವಿದ್ಯುತ್ ಸರ್ವಿಸ್ ಲೈನ್ ಮೇಲೆ ಬಿದ್ದಿದ್ದು, ಮಕ್ಕಳು ಆಡಲು ಬಿಡಲು ಸಾಧ್ಯವಾಗುತ್ತಿಲ್ಲ.
ದೊಡ್ಡ ಗಾಳಿ ಮತ್ತು ಮಳೆಗೆ ಟೊಂಗೆ ಕಿತ್ತು ಬೀಳುವ ಸಾಧ್ಯತೆಯಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮತ್ತು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ. ಟೊಂಗೆ ಬೀಳುವ ಸಂದರ್ಭದಲ್ಲಿ ಮಕ್ಕಳು ಅದರಕೆಳಗಿದ್ದರೇ, ಗಾಯಗೊಳ್ಳಬಹುದು ಎಂಬ ಆತಂಕದಲ್ಲಿ ಅವರು ಮನವಿ ಮಾಡಿದ್ದಾರೆ. ಕೂಡಲೇ ದುರ್ಬಲವಾದ ಟೊಂಗೆಯನ್ನು ಕತ್ತರಿಸಿ ತೆಗೆಯಬೇಕು ಮತ್ತು ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.