ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಳ, ಯಲ್ಲಾಪುರ ಯುವ ಮೋರ್ಚಾ ಹಾಗೂ ವಿವಿಧ ಘಟಕಗಳ ಪ್ರಮುಖರು ಶುಕ್ರವಾರ ಕಿರವತ್ತಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.
ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಿರವತ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಒಂದು ಕಟ್ಟೆ ನಿರ್ಮಾಣ ಮಾಡಲಾಗಿದೆ. ರುದ್ರ ಭೂಮಿಯಲ್ಲಿ ಅತ್ಯವಶ್ಯವಾಗಿರುವ ಮೂಲಭೂತ ಸೌಕರ್ಯಗಳಿಲ್ಲದೇ, ಶವ ಸಂಸ್ಕಾರಕ್ಕೆ ಬರುವ ಜನರಿಗೆ ತೊಂದರೆಯಾಗಿದೆ.
ಪ್ರಮುಖವಾಗಿ ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ, ರಸ್ತೆ, ಪೂರ್ಣಗೊಳ್ಳದಿರುವುದು, ಶವ ಸಂಸ್ಕಾರದ ಕಟ್ಟೆಯ ಹತ್ತಿರ ಸುತ್ತಲೂ ಸಿಮೆಂಟ್ ಕಾಂಕ್ರೀಟ್ ಅಳವಡಿಸುವ ಕಾಮಗಾರಿ ಅತ್ಯವಶ್ಯವಾಗಿ ಆಗಬೇಕಾಗಿದೆ. ಹತ್ತಿರದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಕಂಬಗಳನ್ನು ಅಳವಡಿಸಿ ಹೊಸದಾಗಿ ವಿದ್ಯುತ್ ತಂತಿ ಮಾರ್ಗ ಅಳವಡಿಸಬೇಕಾಗಿದೆ. ಹೀಗಾಗಿ ಅಗತ್ಯವಾಗಿರುವ ಕಾಮಗಾರಿಗಳನ್ನು ಕೂಡಲೇ ಮಂಜೂರು ನೀಡಿ ಹಿಂದು ರುದ್ರ ಭೂಮಿಯಲ್ಲಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಕಿರವತ್ತಿ ಪಂಚಾಯತಿಯಿಂದ ಸ್ಮಶಾನಕ್ಕೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪಂಚಾಯತ ಎದುರು ಸಾರ್ವಜನಿಕರ ಸಹಯೋಗದೊಂದಿಗೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಕೂಡ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಅಧ್ಯಕ್ಷ ರಜೆ ತುಂಬಿದ ಪ್ರಧಾನ ಕಾರ್ಯದರ್ಶಿ ಪ್ರಭು ಚಿಂಚಕಂಡಿ ಹಾಗೂ ರಾಘವೇಂದ್ರ ಕುಂದರಗಿ, ಯಲ್ಲಾಪುರ ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಬಿಜೆಪಿ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ ಬೆಂಗೇರಿ, ಬಿಜೆಪಿ ಓಬಿಸಿ ಮೋರ್ಚಾ ಸದಸ್ಯ ಪರಶುರಾಮ ಮುಗಳಿ, ವೈದ್ಯ ಡಾ. ಅಶೋಕ ದಿಬ್ಬದಮನಿ, ಬಿಜೆಪಿ ಪ್ರಮುಖರಾದ ಕೇಶವ ಕಾಂಬಳೆ, ವಿಶಾಲ ಸೋನಾರ್, ರವಿ ಶಿಂದೆ, ಪರಶುರಾಮ ತಿರುಕಪ್ಪನವರ್, ದೇವರಾಜ ಗಸ್ತಿ, ಗಾಂಧಿ ಸೋಮಪೂರಕರ, ಜಗ್ಗು ಹುಂಬೆ, ಭಾಗು ಪಟಗಾರೆ, ಬಿಜ್ಜು ಪಿಂಗಳೆ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿ ಇದ್ದರು.