ಯಲ್ಲಾಪುರ: ಬಿಸಗೋಡಿನ `ವೀರಾಂಜಿನೇಯ ಮಹಿಳಾ ತಾಳಮದ್ದಲೆ ಕೂಟದವರು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ಸಂಜೆ `ಸುಧನ್ವ ಮೋಕ್ಷ' ತಾಳಮದ್ದಲೆ ಪ್ರದರ್ಶಿಸಿದರು.
ಆಷಾಡ ಏಕಾದಶಿ ನಿಮಿತ್ತ ಈ ಕಾರ್ಯಕ್ರಮ ನಡೆದಿದ್ದು, ಪ್ರೇಕ್ಷಕರನ್ನು ರಂಜಿಸಿತು. ಇದಕ್ಕೂ ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುದರ್ಶನ ಸೇವಾ ಪ್ರತಿಷ್ಠಾನದವರು ಕಾರ್ಯಕ್ರಮ ಸಂಯೋಜಿಸಿದ್ದು, ಭಾಗವಹಿಸಿದ ಕಲಾವಿದರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿಭಾಯಿಸಿದರು.
ಭಾಗವತರಾಗಿ ತಿಮ್ಮಣ್ಣ ಭಾಗವತ್ ಗಾಣಗದ್ದೆ, ಮದ್ದಳೆ ಸುಬ್ರಾಯ್ ಭಟ್ ಗಾಣಗದ್ದೆ, ಚಂಡೆ ನಾಗರಾಜ್ ಭಟ್ ಕವಡಿಕೆರೆ, ಸುದನ್ವನಾಗಿ ಸುಮಾ ಭಟ್ಟ ಬಿಸಗೋಡ, ಅರ್ಜುನ ನಯನಾ ಭಟ್ಟ ಗಣಪೂಮನೆ, ಹಂಸದ್ವಜ ಪಾರ್ವತಿ ಭಟ್ಟ ಕಿಚ್ಚುಪಾಲ್, ಪ್ರಭಾವತಿ ಮೀನಾಕ್ಷಿ ಭಟ್ ಕೆಳಗಿನಪಾಲ್ ಹಾಗೂ ಕೃಷ್ಣನಾಗಿ ವೀಣಾ ಭಟ್ ಬರಗದ್ದೆ ಭಾಗವಹಿಸಿದ್ದರು.
ರಾಮನಗುಳಿ ಬಂಗ್ಲಿ ಘಟ್ಟದಲ್ಲಿ ಸಣ್ಣ ಪ್ರಮಾಣದ ಕುಸಿತ
ಯಲ್ಲಾಪುರ : ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕ ಬಂಗ್ಲಿ ಘಟ್ಟದ ಮೇಲಿನ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿಯತೊಡಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ