ಯಲ್ಲಾಪುರ: ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಯಲ್ಲಾಪುರ ತಾಲೂಕು ಕಚೇರಿಯಲ್ಲಿ ರವಿವಾರ ಸಂಭ್ರಮದಿಂದ ಆಚರಿಸಲಾಯಿತು.
ತಹಶೀಲ್ದಾರ ಅಶೋಕ ಭಟ್ ಅವರು ಶಿವಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಶರಣರ ಆದರ್ಶ ತತ್ವಗಳು ಮತ್ತು ಸಮಾನತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಮಾತನಾಡಿ, ಶರಣರ ಸಂದೇಶದಂತೆ ಸಮಾಜದಲ್ಲಿನ ಅಸಮಾನತೆಗಳನ್ನು ನಿವಾರಿಸಲು ಪ್ರಯತ್ನಿಸಬೇಕೆಂದು ತಿಳಿಸಿದರು.
ಹಡಪದ ಅಪ್ಪಣ್ಣ ಜೀವನ ಚರಿತ್ರೆ ಕುರಿತು ಶಿರಸ್ತೇದಾರ ಗೀತಾ ಜಾಧವ ಉಪನ್ಯಾಸ ನೀಡಿದರು.
ಗ್ರೇಡ್ -2 ತಹಶೀಲ್ದಾರ ಸಿ ಜಿ ನಾಯ್ಕ ಸ್ವಾಗತಿಸಿದರು. ಶಿರಸ್ತೇದಾರರು ತಸ್ನೀಮ್ ಅಸದಿ ವಂದಿಸಿದರು. ಶ್ರೀಧರ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.