ಯಲ್ಲಾಪುರ : ಪಟ್ಟಣದಲ್ಲಿ ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮವಾಗಿ ಪಟ್ಟಣ ಪಂಚಾಯತ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶುಕ್ರವಾರ ಲಾರ್ವಾ ಉತ್ಪತ್ತಿ ತಾಣಗಳ ನಾಶ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಡೆಂಗ್ಯೂ ನಿಯಂತ್ರಣದಲ್ಲಿ ಇದು ಅತ್ಯಂತ ಸಹಕಾರಿ ಆಗಲಿದೆ. ಮನೆ ಮನೆಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳ ಪತ್ತೆ ಹಚ್ಚಿ ನಾಶ ಮಾಡಲಾಯಿತು. ಜನರಿಗೆ ಡೆಂಗ್ಯೂ ಕುರಿತು ಅರಿವು ಮೂಡಿಸಲಾಯಿತು.
ತಮ್ಮ ತಮ್ಮ ವಾರ್ಡಗಳಲ್ಲಿ ಆರೋಗ್ಯ ಸಹಾಯಕರ ಜೊತೆ ಭಾಗವಹಿಸಿದ್ದ ಮಂಜುನಾಥ ನಗರ ವಾರ್ಡ್ ಪಂಪಂ ಸದಸ್ಯ ಸತೀಶ ನಾಯ್ಕ. ರವೀಂದ್ರ ನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ, ಅಂಬೇಡ್ಕರ ನಗರ ವಾರ್ಡ್ ಸದಸ್ಯ ಜನಾರ್ಧನ ಪಾಟಣಕರ, ಉದ್ಯಮನಗರ ವಾರ್ಡ್ ಸದಸ್ಯೆ ಗೀತಾ ನಾಯ್ಕ, ಕಾಳಮ್ಮನಗರ ವಾರ್ಡ್ ಸದಸ್ಯೆ ನರ್ಮದಾ ನಾಯ್ಕ, ನೂತನನಗರ ವಾರ್ಡ್ ಸದಸ್ಯೆ ಪುಷ್ಪಾ ನಾಯ್ಕ, ಜಡ್ಡಿ ವಾರ್ಡ್ ಸದಸ್ಯ ಅಬ್ದುಲ್ ಅಲಿ ಹಮೀದ್ ಹಾಗೂ ಇತರ ಪಟ್ಟಣ ಪಂಚಾಯತ ಸದಸ್ಯರು ಲಾರ್ವಾ ನಾಶ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.