ಯಲ್ಲಾಪುರ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮ(ಹೆಸ್ಕಾಂ) ತಾಲೂಕ ಮಟ್ಟದ ಗ್ರಾಹಕರ ಸಂವಾದ ಹಾಗೂ ಕುಂದು ಕೊರತೆಯ ಸಭೆ ಶನಿವಾರ ಬೆಳಿಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಮಾಕಾಂತ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುತು.
ಮಾವಿನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ಮಾವಿನಮನೆ ಪಂಚಾಯಿತಿಗೆ ಹೆಚ್ಚುವರಿ ಮೂರು ಲೈನಮೆನ್ ಮತ್ತು ಗ್ರಾಮೀಣ ಶಾಖೆಯು ಭೌಗೋಳಿಕವಾಗಿ ಬಹು ವಿಸ್ತಾರವಿರುವುದರಿಂದ ಗ್ರಾಮೀಣ ಶಾಖೆಯನ್ನು ಎರಡು ಶಾಖೆಯನ್ನಾಗಿ ವಿಂಗಡಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ದೇಹಳ್ಳಿ ವೆಂಕಟರಮಣ ಭಟ್ ಬಳಗಾರ್ ತಮ್ಮ ಸಮಸ್ಯೆ ನಿವೇದಿಸಿ, ನಿರಂತರ ವಿದ್ಯುತ್ ನೀಡಲು ಮತ್ತು ಅಡಿಕೆಪಾಲ್ ಪರಿವರ್ತಕದ ಡಿ.ಓ.ಎಲ್ ಸರಿಪಡಿಸಲು ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ರಮಾಕಂತ ನಾಯ್ಕ, ಎಲ್ಲರ ಮನವಿಯನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯಾ ಶಾಖೆಯ ಶಾಖಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಲೇಕ್ಕಾಧಿಕಾರಿ ವಿನಾಯಕ ಶೇಟ್, ಸಹಾಯಕ ಇಂಜಿನಿಯರ್ ತಾಂತ್ರಿಕ ಸಂತೋಷ್ ಬಾವಕರ್ ಕಿರಿಯ ಇಂಜಿನಿಯರ್ ಲಕ್ಷ್ಮಣ್ ಜೋಗಳೇಕರ್, ಗ್ರಾಮೀಣ ಕಿರಿಯ ಇಂಜಿನಿಯರಗಳಾದ ವಿಶಾಲ್ ಹೈಗಾರ್ ಕಿರವತ್ತಿ, ನಾಗರಾಜ ಆಚಾರಿ ಮಂಚಿಕೇರಿ ಸಭೆಯಲ್ಲಿದ್ದರು.